ಏಕದಿನ ಸೂಚನ ಬಸ್‌ಮುಷ್ಕರದಿಂದ ಪರದಾಡಿದ ಪ್ರಯಾಣಿಕರು
ಕೆಎಸ್ಸಾರ್ಟಿಸಿ ಹೆಚ್ಚುವರಿ ಸೇವೆಗಿಳಿದಿದ್ದರೂ ಗ್ರಾಮೀಣ ಪ್ರದೇಶದ ಜನ ಪೂರ್ಣ ತತ್ತರ
ಕಾಸರಗೋಡು: ವಿದ್ಯಾರ್ಥಿಗಳ ರಿಯಾಯಿತಿ ಟಿಕೆಟ್ ದರ ಏರಿಕೆ ಸಹಿತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಇಂದು ಬೆಳಗ್ಗಿನಿಂದ ಆರಂಭಗೊಂಡ ಖಾಸಗಿ ಬಸ್ ಮುಷ್ಕರದಿಂದ ಜನ ಪರದಾಟ ನಡೆಸಿದ್ದು ಪ್ರಯಾಣಿಕ ಸಂದಿಗ್ದಾವಸ್ಥೆಯನ್ನು ನೀಗಿಸಲು ಕೆಲವೆಡೆಗೆ ಕೆಎಸ್ಸಾರ್ಟಿಸಿ ಬಸ್ಸುಗಳು ಹೆಚ್ಚುವರಿ ಸೇವೆ ನಡೆಸುತ್ತಿದೆ.
ಈ ತಿಂಗಳ 22 ರಿಂದ ನಡೆಸಲಿರುವ ಅನಿರ್ದಿಷ್ಟ ಕಾಲ ಮುಷ್ಕರದ ಪೂರ್ವಭಾವಿಯಾಗಿ ಇಂದು ಏಕದಿನ ಸೂಚನ ಮುಷ್ಕರವನ್ನು ಬಸ್ ಮಾಲಕರ ಸಂಘದವರು ಕೈಗೊಂಡಿರುವುದರಿಂದ ಹೆಚ್ಚಾಗಿ ಸಂಕಷ್ಟಕ್ಕೊಳಗಾದವರು ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಪ್ರದೇಶಕ್ಕೆ ತೆರಳುವ ಜನ ಸಾಮಾನ್ಯರಾಗಿದ್ದಾರೆ.
ಕಾಸರಗೋಡು ಬಸ್ ನಿಲ್ದಾಣ ಯಾವಗಲೂ ಬಸ್ ಗಳಿಂದ ತುಂಬಿ ಗಿಜಿಗುಟ್ಟುತ್ತಿದ್ದ ಸ್ಥಳಗಳಲ್ಲಿ ಇಂದು ಮುಷ್ಕರದಿಂದಾಗಿ ಅಲೆಮಾರಿ ದನಗಳು ನಿರಾಂತಕವಾಗಿ ಬೀಡು ಬಿಟ್ಟಿರುವುದು ಕಂಡು ಬರುತ್ತಿದೆ.
ದೂರದ ಊರುಗಳಿಂದ ಬೆಳ್ಳಂಬೆಳಗ್ಗೆ ರೈಲು ಇನ್ನಿತರ ವಾಹನಗಳನ್ನು ಆಶ್ರಯಿಸಿಕೊಂಡು ಬಂದವರು ಲಗೇಜು ಸಮೇತ ಪರದಾಡಬೇಕಾದ ಪರಿಸ್ಥಿತಿ ಉಂಟಾಯಿತು.
ಕಾಸರಗೋಡು ಕೆಎಸ್ಸಾರ್ಟಿಸಿ ಡಿಪ್ಪೊದಿಂದ ಕೆಲವು ಪ್ರದೇಶಗಳಿಗೆ ಹೆಚ್ಚುವರಿ ಸರ್ಕಾರಿ ಬಸ್ಸಿನ ಸೇವೆ ಏರ್ಪಡಿಸಿದ್ದರು. ಸೀತಾಂಗೋಳಿ,ಮಧೂರು, ಬೆದ್ರಡ್ಕ, ಬದಿಯಡ್ಕ, ಬಾಡೂರು ಪುತ್ತಿಗೆ,ಮುಂಡಿತ್ತಡ್ಕ ನೀರ್ಚಾಲು, ಬೆಳಿಂಜ,ಕುಂಬ್ಡಾಜೆ, ನಾರಂಪಾಡಿ,ಮೌವ್ವಾರು , ಕಿನ್ನಿಂಗಾರು,ಅಡೂರು,ದೇಲಂಪಾಡಿ ಮೊದಲಾದ ಪ್ರದೇಶಗಳಿಗೆ ಖಾಸಗೀ ಬಸ್ಸು ಸಂಚಾರವೇ ಪ್ರಮುಖವಾಗಿರುವುದರಿಂದ ಬಸ್ ಮುಷ್ಕರ ಪೂರ್ಣವಾಗಿ ಈ ಪ್ರದೇಶವಾಸಿಗಳಿಗೆ ಬಾಧಿಸಿದೆ.
0 Comments