Ticker

6/recent/ticker-posts

350 ಗ್ರಾಂ ಗಾಂಜಾ ಸಹಿತ ಓರ್ವ ಯುವಕನ ಬಂಧನ, ಓರ್ವ ಪರಾರಿ


 ಕುಂಬಳೆ: 350 ಗ್ರಾಂ ಗಾಂಜಾ ಸಹಿತ ಓರ್ವ ಯುವಕನನ್ನು  ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಡಂಬಾರು ಪಜಿಂಗಾರು ನಿವಾಸಿ ಅರುಣ್(21) ಬಂಧಿತ ಆರೋಪಿ‌. ಎರಡನೇ ಆರೋಪಿ  ಜೋಡುಕಲ್ಲು ಮುಡಂದೂರು ನಿವಾಸಿ ಬಿ.ಎಂ.ಅಬ್ದುಲ್ ಗಫೂರ್(33) ಓಡಿ ಪರಾರಿಯಾಗಿದ್ದಾನೆ. ಕುಂಬಳೆ ಎಕ್ಸ್ಪ್ರೆಸ್ ಇನ್ಸ್ಪೆಕ್ಟರ್ ಶ್ರವಣ ಅವರ  ನೇತೃತ್ವದಲ್ಲಿ ಬೇಲೂರಿನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಗಾಂಜಾ ಸಹಿತ ಆರೋಪಿಯ ಬಂಧನ ನಡೆದಿದೆ. ಪರಾರಿಯಾದ ಆರೋಪಿ ಅಬ್ದುಲ್ ಗಫೂರ್, ಬಂದ್ಯೋಡು ಪರಿಸರಗಳಲ್ಲಿ ಗಾಂಜಾ ಪೂರೈಸುವ ಪ್ರಮುಖ ವ್ಯಕ್ತಿ ಎಂದು ತಿಳಿದು ಬಂದಿದೆ. ಈತನ ವಿರುದ್ದ ಮಾದಕ ವಸ್ತು ಸಾಗಾಟದ ಹಲವು ಪ್ರಕರಣಗಳಿವೆ. ಎಕ್ಸ್ಪ್ರೆಸ್ ಅಧಿಕಾರಿಗಳಾದ ಕೆ.ವಿ.ಮನಾಸ್, ಎಂ.ಎಂ.ಅಖಿಲೇಶ್, ಕೆ.ಸುರ್ಜಿತ್, ಬಿಜಿಲ ಚಾಲಕ ಪ್ರವೀಣ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments