ಅಡೂರು : ಪೇಟೆಯಿಂದ ಕಾಟಿಕ್ಕಜೆಗೆ ತೆರಳುವ ರಸ್ತೆ ಮಧ್ಯೆ ಕೋರಿಕಂಡ ಎಂಬಲ್ಲಿ ಧಾರಾಕರ ಮಳೆಗೆ ಗುಡ್ಡವೊಂದು ಇಂದು ಬೆಳಗ್ಗೆ ತೀವ್ರವಾಗಿ ಕುಸಿದಿದ್ದು ಈ ಭಾಗದ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ದೇಲಂಪಾಡಿ ಗ್ರಾಮ ಪಂಚಾಯತಿನ 6ನೇ ವಾರ್ಡ್ ನ ಕೋರಿಕಂಡದಲ್ಲಿ ಈ ರೀತಿ ಗುಡ್ಡ ಕುಸಿಯುತ್ತಿರುವುದು ಸತತ ಇದು ಮೂರನೇ ಬಾರಿಯಾಗಿದೆ. ಈ ಬಗ್ಗೆ ಊರ ನಾಗರಿಕರು ಸಾಕಷ್ಟು ಭಾರಿ ವಾರ್ಡ್ ಸದಸ್ಯ ಸಹಿತ ಅಧಿಕೃತರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಿಲ್ಲದಾಗಿದೆ. ಈ ದಾರಿಯಾಗಿ ಹಲವರು ವಿವಿಧ ಉದ್ದೇಶಗಳಿಗೆ ಅಡೂರು ಪೇಟೆ ಸಹಿತ ಮುಳ್ಳೇರಿಯ, ಕಾಸರಗೋಡು,ನೆರೆಯ ಕರ್ನಾಟಕಕ್ಕೆ ತೆರಳಬೇಕಾಗಿದ್ದು ರಾಶಿ ಬಿದ್ದ ಮಣ್ಣನ್ನು ತೆರವುಗೊಳಿಸುದೇ ಹರ ಸಾಹಸದ ಕೆಲಸವಾಗುತ್ತಿದೆ ಎಂದು ಊರವರು ದೂರಿದ್ದಾರೆ.
0 Comments