Ticker

6/recent/ticker-posts

ಶಾಲೆಯಲ್ಲಿ ಕಂಡು ಬಂದ ಆರು ಅಡಿ ಉದ್ದದ ನಾಗರ ಹಾವು; ಅಧ್ಯಾಪಕರ ಸಮಯೋಚಿತ ಕ್ರಮದಿಂದ ಹಿಡಿದು ಕಾಡಿನಲ್ಲಿ ಬಿಟ್ಟ ಸರ್ಪ ಸ್ವಯಂಸೇವಕ


 ಮುಳ್ಳೇರಿಯ: ಶಾಲೆಯಲ್ಲಿ ಕಂಡು ಬಂದ ಆರು ಅಡಿ ಉದ್ದದ ನಾಗರ ಹಾವನ್ನು ಸರ್ಪ ವಾಲಿಂಟಿಯರ್ ಹಿಡಿದು ಕಾಡಿಗೆ ಬಿಟ್ಟ ಘಟನೆ ನಡೆದಿದೆ. ಬೆಳ್ಳೂರು ಸರಕಾರಿ  ಹಯರ್ ಸೆಕಂಡರಿ ಶಾಲೆಯ ಎಲ್‌ಪಿ.ವಿಭಾಗ ಕಟ್ಟಡದಲ್ಲಿ ಬುದವಾರ ಹಾವು ಪ್ರತ್ಯಕ್ಷವಾಗಿತ್ತು. ಕೂಡಲೇ ಮಕ್ಕಳನ್ನು ಹೊರಕ್ಕೆ ಕಳುಹಿಸಿ ನೋಡಿದಾಗ ಹಾವು ಇರಲಿಲ್ಲ. 

ಗುರುವಾರ ಅಧ್ಯಾಪಕರು ತಲುಪಿ ಹುಡುಕಾಡಿದರೂ ಹಾವು ಕಂಡು ಬರಲಿಲ್ಲ. ನಿನ್ನೆ (ಶುಕ್ರವಾರ) ಪುನಃ ಹಾವು ಕಂಡು ಬಂದಿದ್ದು ಕಾರಡ್ಕ ಬಾಳಕಂಡದ ಸರ್ಪ ಸ್ವಯಂಸೇವಕ (ವಾಲೆಂಟಿಯರ್) ಸುನಿಲ್ ಕುಮಾರ್ ಆಗಮಿಸಿ ಹಾವನ್ನು ಹಿಡಿದು ದಟ್ಟಾರಣ್ಯಕ್ಕೆ ಬಿಟ್ಟರು

Post a Comment

0 Comments