Ticker

6/recent/ticker-posts

ಸಾರ್ವಜನಿಕ ಸಮಸ್ಯೆಯ ಕುರಿತು ದೂರು ದಾಖಲಿಸಿದ ಮಹಿಳೆಗೆ ಕುಂಬಳೆ ಪಂಚಾಯತಿ ಕಾರ್ಯದರ್ಶಿ ಕಿರುಕುಳ; ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡ ಸಾಮಾಜಿಕ ಕಾರ್ಯಕರ್ತೆ


 ಕುಂಬಳೆ: ಕುಂಬಳೆ ನಗರದ ಹೃದಯ ಭಾಗದಲ್ಲಿ ರಸ್ತೆ ಬದಿ ವ್ಯಾಪಾರಿಗಳು ಅವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಹಿಳೆಯರು ಸೇರಿದಂತೆ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ ಎಂದು ದೂರು ದಾಖಲಿಸಿದ್ದಕ್ಕಾಗಿ ಕುಂಬಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮಾತೃ ಪಿಟಿಎ ಅಧ್ಯಕ್ಷೆ, ಸಾಮಾಜಿಕ ಕಾರ್ಯಕರ್ತೆ ವಿನಿಶಾ ಬಾಲಕೃಷ್ಣನ್ ಕುಂಬಳೆ ಪ್ರೆಸ್ ಪೋರಂನಲ್ಲಿ ಗುರುವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಈ ವಿಷಯದ ಕುರಿತು ಅವರು ಜುಲೈ 8 ರಂದು ಕುಂಬಳೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗೆ ದೂರು ನೀಡಿದ್ದರು. ನೂರಾರು ಶಾಲಾ ವಿದ್ಯಾರ್ಥಿಗಳು ಹೋಗುವ ದಾರಿಯಲ್ಲಿ ಹುಡುಗಿಯರು ಕೆಟ್ಟ ಅನುಭವ ಅನುಭವಿಸುವುದು ಸಾಮಾನ್ಯ. ಮಕ್ಕಳು ತಮ್ಮ ಪೋಷಕರು ಮತ್ತು ಶಿಕ್ಷಕರಿಗೆ ದೂರು ನೀಡಲು ಪ್ರಾರಂಭಿಸಿದಾಗ ಈ ವಿಷಯಕ್ಕೆ ಮಧ್ಯಪ್ರವೇಶಿಸಲಾಯಿತು. ಕಿರಿದಾದ ಪಾದಚಾರಿ ಮಾರ್ಗದಲ್ಲಿರುವ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ವಿನಿಶಾ ಪಂಚಾಯತಿ ï ಕಾರ್ಯದರ್ಶಿಗೆ ನೀಡಿದ ದೂರಿನಲ್ಲಿ ಗಮನಸೆಳೆದಿದ್ದಾರೆ.

ಮೌಖಿಕ ದೂರು ನೀಡಿದ ನಂತರವೂ ಅದನ್ನು ನಿರ್ಲಕ್ಷಿಸಲಾಗಿದೆ. ಅದಕ್ಕಾಗಿಯೇ ಲಿಖಿತ ದೂರು ದಾಖಲಿಸಲಾಗಿದೆ. ದಿನಗಳು ಕಳೆದರೂ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಇತರ ಅಧಿಕೃತರೊಂದಿಗೆ ಪಿತೂರಿ ನಡೆಸಿ ತನಿಖೆಗೆ ಬಂದಾಗ ತನ್ನನ್ನು ಒಬ್ಬಂಟಿಯಾಗಿ ಬಿಟ್ಟು ಸಿಲುಕಿಸಲು ಪ್ರಯತ್ನಿಸಿದ್ದೀರಾ ಎಂದು ಕಾರ್ಯದರ್ಶಿ ಕೇಳಿದರು. ತಾನು ಕಳೆದ ಹಲವಾರು ವರ್ಷಗಳಿಂದ ಕುಂಬಳೆಯಲ್ಲಿ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಚಟುವಟಿಕೆಗಳಲ್ಲಿ ನಿಯಮಿತವಾಗಿ ತೊಡಗಿಸಿಕೊಂಡಿರುವ ವ್ಯಕ್ತಿ. ಅನೇಕ ಸಾರ್ವಜನಿಕ ಸಮಸ್ಯೆಗಳ ಕುರಿತು ದೂರುಗಳನ್ನು ದಾಖಲಿಸಿ ಪರಿಹಾರ ಕಂಡುಕೊಂಡಿರುವೆ. ಜನರ ಮೇಲೆ ಪರಿಣಾಮ ಬೀರುವ ದೂರು ದಾಖಲಿಸಿದ್ದಕ್ಕಾಗಿ ಸರ್ಕಾರಿ ಅಧಿಕಾರಿಯೊಬ್ಬರು ಇಂತಹ ಕಪೋಲಕಲ್ಪಿತ ಸಂಶಯ ವ್ಯಕ್ತಪಡಿಸಿ ದೂರು ದಾಖಲಿಸಿದ್ದು ಇದೇ ಮೊದಲು. ದೂರಿನ ವಿಚಾರಣೆಗೆ ಕಾರ್ಯದರ್ಶಿ ಬಳಿ ತೆರಳಿದಾಗ  ಕಾರ್ಯದರ್ಶಿ ಗದ್ದಲ ಸೃಷ್ಟಿಸಿದರು. ಕಾರ್ಯದರ್ಶಿಯ ಒಪ್ಪಿಗೆಯೊಂದಿಗೆ, ಅನೇಕ ಜನರು ಅವರ ವೀಡಿಯೊವನ್ನು ಚಿತ್ರೀಕರಿಸಿದರು. ಇದನ್ನು ಜಾಲತಾಣದಲ್ಲಿ ಹರಿಯಬಿಟ್ಟು ತನಗೆ ವ್ಯಾಪಕ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಲಾಯಿತು. ಪ್ರಕರಣ ಕುಂಬಳೆ ಪೋಲೀಸ್ ಠಾಣೆ ಮೆಟ್ಟಲೇರಿದಾಗ ಪೋಲೀಸ್ ಅಧಿಕಾರಿಯೊಬ್ಬರು ತನ್ನ ದೌರ್ಜನ್ಯದ ಬಗ್ಗೆ ದೂರು ನೀಡುವಂತೆ ಪ್ರಲೋಭನೆಗೊಳಪಡಿಸಿ ಬಳಿಕ, ಅದೇ ಪೋಲೀಸ್ ಅಧಿಕಾರಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದರು ಎಂದು ವಿನಿಶಾ ಹೇಳಿದರು.

ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಿಷಾ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠರಿಗೆ ದೂರು ನೀಡಿರುವುದಾಗಿ ನಿಮಿಷಾ ತಿಳಿಸಿದರು. ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗಿದೆ. ನಾಲ್ಕು ಹೆಣ್ಣುಮಕ್ಕಳ ತಾಯಿಯಾಗಿ, ಇಂತಹ ಘಟನೆಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿರುವುದಾಗಿ ಅವರು ಅವಲತ್ತುಕೊಂಡರು.

ತನಗೆ ನ್ಯಾಯ ದೊರಕಬೇಕು. ಸಾರ್ವಜನಿಕ ಹಿತಾಸಕ್ತಿಯಿಂದ ತಾನು ಕಾರ್ಯದರ್ಶಿಗೆ ಸಲ್ಲಿಸಿದ ದೂರಿನ ಬಗ್ಗೆ ಅವರು ಇನ್ನೂ ಕ್ರಮ ಕೈಗೊಂಡಿಲ್ಲ. ಇದಕ್ಕಾಗಿ ತಾನು ಯಾವುದೇ ಮಟ್ಟಕ್ಕೂ ಹೋಗಲು ಸಿದ್ಧನಿದ್ದೇನೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಏಷ್ಯಾದ ಅತಿದೊಡ್ಡ ಆಂದೋಲನವಾದ ಕುಟುಂಬಶ್ರೀಯ ಸಕ್ರಿಯ ಕಾರ್ಯಕರ್ತೆಯಾಗಿರುವ ತನಗೆ ಇಂತಹ ಪರೀಕ್ಷೆ ಎದುರಾದರೆ, ಸಾಮಾನ್ಯ ಮಹಿಳೆಯರಿಗೆ ಏನಾಗಬಹುದು ಎಂದು ವಿನಿಷಾ ಸುದ್ದಿಗೋಷ್ಠಿಯಲ್ಲಿ ಕೇಳಿದರು.

Post a Comment

0 Comments