Ticker

6/recent/ticker-posts

ಪೆರ್ಲ ಶಾಲಾ ನಾಯಕಿಯಾಗಿ ಸಮನ್ವಿ ಬಜಕೂಡ್ಲು ಆಯ್ಕೆ ; ಪ್ರಜಾಪ್ರಭುತ್ವದ ಸಂವಿಧಾನ ಮಾದರಿ ಚುನಾವಣೆ


 ಪೆರ್ಲ : ಪೆರ್ಲ ಸತ್ಯನಾರಾಯಣ ಎ ಎಲ್ ಪಿ  ಶಾಲಾ ಅಸೆಂಬ್ಲಿ ಚುನಾವಣೆಯಲ್ಲಿ 11 ಮಕ್ಕಳು ಭಾಗವಹಿಸಿ ಮತದಾನ ಪ್ರಕ್ರಿಯೆಯ ಮೂಲಕ ಚುನಾವಣೆಯ ಮಹತ್ವಕ್ಕೆ ಮಾದರಿಯಾದರು.  . ಕಾರು, ವ್ಯಾನ್ ಬಸ್ಸು ರೈಲು ಹೆಲಿಕಾಪ್ಟರ್ ಬೋಟ್ ಹಡಗು ಜೀಪ್ ಸೈಕಲ್ ಸ್ಕೂಟರ್ ಲಾರಿ ಇಂತಹ ಚಿಹ್ನೆಗಳನ್ನು ಪ್ರತಿನಿಧಿಸಿದ ಅಭ್ಯರ್ಥಿಗಳು ಶಾಲಾ ಚುನಾವಣಾ ಕಣ ರಂಗೇರುವಂತೆ ಮಾಡಿದ್ದಾರೆ.

ಶಾಲಾ ಐಡಿ ಕಾರ್ಡ್ ತೋರ್ಪಡಿಸಿ ಸರತಿ ಸಾಲು ನಿಂತು ಮತ ಚಲಾಯಿಸಿದರು. ಮತ ಎಣಿಕೆಯ ಪ್ರಕ್ರಿಯೆಯ ಬಳಿಕ ವ್ಯಾನ್ ಚಿಹ್ನೆಯ ಸಮನ್ವಿ ಬಜಕೂಡ್ಲು ಶಾಲಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈಕೆ ರಾಜೇಶ್ ಬಜಕೂಡ್ಲು- ಸುನೀತಾ ದಂಪತಿಗಳ ಪುತ್ರಿ. ಎರಡನೇ ಸ್ಥಾನ ಗಳಿಸಿದ ಆಧೀಶ್ ರೈ ಬಜಕೂಡ್ಲು ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಚುನಾವಣಾಧಿಕಾರಿಯಾಗಿದ್ದರು. ಶಿಕ್ಷಕ ವೃಂದ ಚುನಾವಣೆಯನ್ನು ನಿಭಾಯಿಸಿದೆ.

Post a Comment

0 Comments