ಮಂಜೇಶ್ವರ: ಸುಮಾರು 75 ವರ್ಷಗಳ ಇತಿಹಾಸ ಹೊಂದಿರುವ ಬೆರಿಪದವು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಆಶ್ರಯದಲ್ಲಿ ಶ್ರೀ ಮೂಕಾಂಬಿಕಾ ಸಭಾ ಭವನ ನಿರ್ಮಾಣದ ಯೋಜನೆಯನ್ನು ಪದಾಧಿಕಾರಿಗಳು ಕೈಗೊಂಡಿದ್ದಾರೆ. ಇದರ ಅಂಗವಾಗಿ ವಿನಂತಿ ಪತ್ರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅವರು ವಿನಂತಿ ಪತ್ರವನ್ನು ಬಿಡುಗಡೆಗೊಳಿಸಿದರು.ಶ್ಯಾಂ ಸೂರ್ಯ ಮುಳಿಗದ್ದೆ ಅವರು 1 ಲಕ್ಷ ರೂ ನೀಡಿ ಪ್ರಥಮ ರಶೀದಿ ಪಡೆದರು. ಯಶವಂತ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದರು. ಜಯರಾಜ ಶೆಟ್ಟಿ ಚಾರ್ಲ, ನಾರಾಯಣ ನಾಯ್ಕ ನಡುಹಿತ್ತಿಲು, ರವಿ ಬೆರಿಪದವು, ಅಶೋಕ್ ಕೊಜಪೆ, ಶಿವಕುಮಾರ್ ಕಲ್ಲಗದ್ದೆ, ಕೃಷ್ಣಮೂರ್ತಿ ಶಾಂತಿಮೂಲೆ, ರಾಕೇಶ್ ಕೊಜಪೆ, ಹಾಗೂ ಸದಾಶಿವ ಶೆಟ್ಟಿ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್ ಮಾಸ್ತರ್ ಬೆರಿಪದವು ಸ್ವಾಗತಿಸಿ ಶಿವಪ್ರಸಾದ್ ಆಳ್ಚ ಪೆರುವೋಡಿ ವಂದಿಸಿದರು. ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಸನ್ಮಾನಿಸಲಾಯಿತು.
0 Comments