Ticker

6/recent/ticker-posts

ಬದಿಯಡ್ಕ ಬಂಟರ ಸಂಘದ ಆಶ್ರಯದಲ್ಲಿ ಬಂಟೆರೆ ಆಟಿದ ಕೂಟ ಅಗಸ್ಟ್ 3 ಆದಿತ್ಯವಾರದಂದು


 ಬದಿಯಡ್ಕ: ಬಂಟರ ಸಂಘ(ರಿ) ಬದಿಯಡ್ಕ  ಇದರ ಆಶ್ರಯದಲ್ಲಿ ಬಂಟೆರೆ ಆಟಿದ ಕೂಟವು ಅಗಸ್ಟ್ 3 ಆದಿತ್ಯವಾರ ಬೆಳಗ್ಗೆ 9 ಗಂಟೆಯಿಂದ ಇಲ್ಲಿನ ವಳಮಲೆ ಇರಾ ಸಭಾಭವನದಲ್ಲಿ ಜರಗಲಿರುವುದು. ಕಾರ್ಯಕ್ರಮದಲ್ಲಿ ಮಿಠಾಯಿ ಹೆಕ್ಕುವುದು (LKG, UKG ಮಕ್ಕಳಿಗೆ),  ಸಂಗೀತ ಕುರ್ಚಿ (ಎಲ್.ಪಿ, ಯು.ಪಿ. ಹೈಸ್ಕೂಲು, ಹಯರ್ ಸೆಕಂಡರಿ ಮಕ್ಕಳಿಗೆ, ಮಹಿಳೆಯರಿಗೆ),  ಹಗ್ಗ ಜಗ್ಗಾಟ(ಪುರುಷರಿಗೆ) ಮೊದಲಾದ ಸ್ಪರ್ದೆಗಳು ಇರುವುದು. ಅಲ್ಲದೆ ಸನ್ಮಾನ, ಆಟಿಯ ವಿಶೇಷ, ಉಪಾನ್ಯಾಸ, ಆಟಿಯ ತಿನಿಸುಗಳನ್ನು ಸಹ ಏರ್ಪಡಿಸಲಾಗಿದೆ. ಬಂಟ ಸಮುದಾಯದ ಹಿರಿಯರೂ  ಕೊಡುಗೈದಾನಿಗಳೂ ಆದ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಡಪ್ಪಳ್ಳ ಕ್ಷೇತ್ರದ ಮೊಕ್ತೇಸರ ಕೆ.ಕೆ.ಶೆಟ್ಟಿ  ಸಹಿತ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಲಹೆ, ಸೂಚನೆಗಳನ್ನು ನೀಡಲಿರುವರು

Post a Comment

0 Comments