ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್ ಕಾವುಗೊಳಿ ಕಡಲ ತೀರದಲ್ಲಿ ಅತಿಯಾಗಿ ಕಡಲ್ ಕೊರೆತವಾಗುತ್ತಿದೆ. ಕಾವು ಗೊಳಿ ಪ್ರದೇಶದಲ್ಲಿ ಸುಮಾರು 200 ಮನೆಗಳಿದೆ. ವೃತ್ತಿಯಲ್ಲಿ ಮೀನುಗಾರರಾಗಿರುವ ಎಲ್ಲರಿಗೂ ಸರಿಯಾದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಇಲ್ಲ. ಆರೋಗ್ಯ ಸಮಸ್ಯೆ ಅಥವಾ ಇನ್ನಿತರ ಅತಿ ತುರ್ತು ಕಾರ್ಯಗಳು ಬಂದಾಗ ಕಾವುಗೋಳಿ ಕಡಪುರಂ ನಿವಾಸಿಗಳು ಆಶ್ರಯಿಸುತ್ತಿರುವುದು ಕಾವುಗೋಳಿ ಬೀಚ್ ರೋಡ್ ರಸ್ತೆಯನ್ನು, ಆದರೆ ಕಡಲ್ ಕೊರೆ ತದಿಂದಾಗಿ ಈ ಏಕೈಕ ರಸ್ತೆಯು ಕೂಡ ಅಳಿದು ಹೋಗುವ ಅಂಚಿನಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಪ್ರದೇಶವಾಸಿಗಳು ಅನುಭವಿಸುತ್ತಿರುವ ಈ ಸಮಸ್ಯೆಗೆ ಯಾವುದೇ ಪರಿಹಾರ ಇದುವರೆಗೆ ಲಭಿಸಲಿಲ್ಲ. ಅನೇಕ ಸಲ ಜನಪ್ರತಿನಿಧಿಗಲು ಅಧಿಕೃತರ ಕದ ತಟ್ಟಿದರು ಕೂಡ ಯಾರು ಕಣ್ಣು ತೆರೆದು ನೋಡಲು ಕೂಡ ತಯಾರಾಗದ ಪರಿಸ್ಥಿತಿ. ಇನ್ನೂ ಇದನ್ನು ಸಹಿಸಿಕೊಂಡು ನಿಲ್ಲಲು ಸಾಧ್ಯವಿಲ್ಲ. ಇದು ಮೀನುಗಾರರ, ಕಾವು ಗೊಳಿ ಪ್ರದೇಶವಾಸಿಗಳ ಅಳಿವು ಉಳಿವಿನ ಪ್ರಶ್ನೆ ಆದಕಾರಣ ಧರಣಿ ಸತ್ಯಾಗ್ರಹಕ್ಕೆ ಇಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಪಡೆದುಕೊಳ್ಳಲು ಕಾವು ಗೋಳಿ ಪ್ರದೇಶ ಮೊಗ್ರಾಲ್ ಪುತ್ತೂರು ಬಿಜೆಪಿ ಸಮಿತಿ ಅಧ್ಯಕ್ಷರು ಸಂಪತ್ ಪೆರ್ನಡ್ಕ ಅವರ ನೇತೃತ್ವದಲ್ಲಿ ಸದಸ್ಯೆ ಮಲ್ಲಿಕಾ ಪ್ರಭಾಕರ್ ಅವರು ಕನ್ವೀನರ್ ಆಗಿರುವ ಆಕ್ಷನ್ ಸಮಿತಿಯನ್ನು ರೂಪಿಕರಿಸಲಾಗಿದೆ.
0 Comments