ಗುವೇದಪಡ್ಪು: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ (ರಿ) ಗುವೇದಪಡ್ಪು ಇದರ ನೇತೃತ್ವದಲ್ಲಿ ಎಸೆಸೆಲ್ಸಿ,ಪಿಯುಸಿ ಹಾಗೂ ಡಿಗ್ರಿ ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯೆ ಶ್ರೀಮತಿ ಮೀನಾಕ್ಷಿ ಬೊಡ್ಡೋಡಿ ನೆರವೇರಿಸಿ ,"ಪುಸ್ತಕಗಳ ಓದುವಿಕೆಯಿಂದ ಜೀವನದ ಮೌಲ್ಯಗಳು ಹೆಚ್ಚಾಗುತ್ತವೆ ಮತ್ತು ಅದರಿಂದ ಉತ್ತಮ ಸಂಸ್ಕಾರಯುತ ಜೀವನ ನಡೆಸಲು ಪ್ರೇರಣೆಯನ್ನು ನೀಡುತ್ತದೆ.ಆದ್ದರಿಂದ ಓದಿ ಬೆಳೆಯಿರಿ ಎಂಬ ಹಿತನುಡಿಯನ್ನು ತಿಳಿಸಿದರು. ಗ್ರಂಥಾಲಯದ ಅಧ್ಯಕ್ಷರಾದ ಜಯರಾಮ ಕೊಣಿಬೈಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೋಪಾಲ ಮಾಸ್ತರ್ ಆನೇಕಲ್,ಅಭಿಷೇಕ್ ಗುವೇದಪಡ್ಪು ,ಕಿಶೋರ್ ಮಾಸ್ತರ್ ಆನೇಕಲ್,ಚೈತ್ರ ಟೀಚರ್ ಬಗಂಬಿಲ,ರುಬೀನಾ ಟೀಚರ್ ಗುವೇದಪಡ್ಪು ,ಚಂದ್ರಹಾಸ ಕತ್ತೆರಿಕೋಡಿ ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಸ್ಸೆಲ್ಸಿ ಪಾಸಾದ ನಿಶಿತಾ,ಕುಮಾರಿ ಸುಚಿತ, ತೌಸಿನ ಮತ್ತು ನಿಸಾರ್ ಹಾಗೂ ಪಿಯುಸಿ ಪಾಸಾದ ಸಿಂಚನ, ಸುಶ್ಮಿತ್,ಲಾವಣ್ಯ,ಧನುಶ್ರೀ ,ಚಿಂತನ್ ಶೆಟ್ಟಿ ಹಾಗೂ ಎಂ ಎ ಪಾಸಾದ ತನುಜಾ ಶ್ರೀ ಗುವೇದಪಡ್ಪು ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಲಾವಣ್ಯ,ಸಿಂಚನ ಹಾಗೂ ತನುಜಾ ಶ್ರೀ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಗ್ರಂಥಪಾಲಕಿ ಜಯಶ್ರೀ ವಂದಿಸಿದರು
0 Comments