ಮಂಜೇಶ್ವರ : ತನ್ನ ದುಡಿಮೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸಬೇಕು, ಆ ನಿಟ್ಟಿನಲ್ಲಿ ಸಮಾಜದಲ್ಲಿರುವ ಅಶಕ್ತರ ಪಾಲಿಗೆ ಬೆಳಕಾಗಬೇಕೆಂದು ಕಷ್ಟಕ್ಕೆ ಸ್ಪಂದಿಸುತ್ತಾ ಬಂದಿರುವ ಕುಳೂರು ಕನ್ಯಾನ ಡಾ. ಸದಾಶಿವ ಶೆಟ್ಟಿಯವರ ಕನಸಿನ ಕೂಸಾದ ಉಚಿತ ಆರೋಗ್ಯ ವಿಮೆ/ ಅಪಘಾತ ವಿಮೆಯ ಯೋಜನೆಯು ಈಗಾಗಲೇ ಕೈಗೂಡಿದ್ದು ಇದರ ಅಪಘಾತ ವಿಮಾ ಪಾಲಿಸಿ ವಿತರಣೆ ಚಿಗುರುಪಾದೆಯಲ್ಲಿರುವ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಕೇಂದ್ರ ಸಮಿತಿಯ ಕಚೇರಿಯಲ್ಲಿ ಜರಗಿತು.
ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿಮಾ ಪಾಲಿಸಿಯ ವಿತರಣೆ ಕಾರ್ಯಕ್ರಮ ಹಾಗೂ ನಿತ್ಯ ನಿರಂತರ ಸಹಾಯ ಹಸ್ತವನ್ನು ಇಂದು ಚಿಗುರುಪಾದೆಯ ಕೇಂದ್ರ ಕಚೇರಿಯಲ್ಲಿ ಡಾ. ಸದಾಶಿವ ಶೆಟ್ಟಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಪೋಸ್ಟಲ್ ಪೇಮೆಂಟ್ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಮಾನಸ್ ಜಾರ್ಜ್, ಸದಾಶಿವ ಶೆಟ್ಟಿ ಅವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಸದಾಶಿವ ಶೆಟ್ಟಿ ಸೇವಾ ಬಳಗದ ಉಪಾಧ್ಯಕ್ಷರಾದ ನಾರಾಯಣ ನೈಕ್ ನಡುಹಿತ್ಲು, ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ, ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲ್, ನಮ್ಮ ಕುಡ್ಲ ಚಾನಲ್ ಮಾಲಕರಾದ ಶ್ರೀ ಲೀಲಾಕ್ಷ ಕರ್ಕೇರ, ಸಂಯೋಜಕರಾದ ಕದ್ರಿ ನವನೀತ್ ಶೆಟ್ಟಿ, ಸದಸ್ಯರುಗಳಾದ ಅಬ್ದುಲ್ ಮಜೀದ್ ಸಾಹೇಬ್, ಸುಬ್ಬಣ್ಣ ಆಳ್ವ,ಜಯಲಕ್ಷ್ಮಿ ಆರ್ ಶೆಟ್ಟಿ,ಪ್ರಮೋದ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ ಬಾಯಾರು, ರವೀಂದ್ರ ಬೆರಿಪದವು, ಕೃಷ್ಣಮೂರ್ತಿ, ರಾಕೇಶ್ ಹಾಗೂ ಪೋಸ್ಟ್ ಆಫೀಸ್ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.
0 Comments