ಮೀಯಪದವು : ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಮೀಯಪದವು ಇಲ್ಲಿ ಪಿ ಯನ್ ಪಣಿಕ್ಕರ್ ಸ್ಮರಣಾರ್ಥ ವಾಚನಾ ಸಪ್ತಾಹ ಸಮಾರೋಪ ಸಮಾರಂಭ ,ವಿವಿಧ ಕ್ಲಬ್ ಗಳ ಉದ್ಘಾಟನೆ ,ಜುಂಬಾ ಡ್ಯಾನ್ಸ್ ಕಾರ್ಯಾಗಾರ ,ಮಾದಕ ವಸ್ತು ವಿರೋಧಿ ದಿನಾಚರಣೆಯು ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.ವಿವಿಧ ಕ್ಲಬ್ ಗಳ ಉದ್ಘಾಟನೆಯನ್ನು ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ರಾಮಚಂದ್ರ ಕೆ ಯಂ ಉದ್ಘಾಟಿಸಿ ಮಾತನಾಡಿದರು.ಹಿರಿಯ ಅಧ್ಯಾಪಕರೂ ಉರ್ದು ಕ್ಲಬ್ ನ ಸಂಚಾಲಕರಾದ ಬಾಲಕೃಷ್ಣ ಮಾಸ್ತರ್ ಕ್ಲಬ್ ಗಳ ಕಾರ್ಯ ವೈಖರಿ ಮತ್ತು ಅಗತ್ಯತೆಯನ್ನು ಮಕ್ಕಳಿಗೆ ತಿಳಿಸಿದರು. ವಿಜ್ಞಾನ ಕ್ಲಬ್ ನ ಸಂಚಾಲಕ ವಿನಯಕೃಷ್ಣ ನೇತೃತ್ವದಲ್ಲಿ ಮಕ್ಕಳು ಪ್ರಯೋಗ ನಡೆಸಿದರು.ಸಮಾಜ ವಿಜ್ಙಾನ ಕ್ಲಬ್ ಸಂಚಾಲಕ ಮಹಾಬಲೇಶ್ವರ ಭಟ್ ಅವರ ನೇತೃತ್ವದಲ್ಲಿ ಮಕ್ಕಳು ಒಂದು ಚಟುವಟಿಕೆಯನ್ನು ಮಾಡಿ ತೋರಿಸಿದರು.ತದನಂತರ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಲ್ಯಾಬ್ ನ ಸಂಚಾಲಕರಾದ ಹರೀಶ್ ಮಾಸ್ತರ್ ಸಿಗರೇಟ್ ಸೇವನೆಯಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಿದರು. ಬೃಹತ್ ಗಾತ್ರದ ಸಿಗರೇಟ್ ಮಾದರಿಯನ್ನು ತಯಾರಿಸಿ ಅದಕ್ಕೆ ಬೆಂಕಿ ಹಚ್ಚಲಾಯಿತು.ಶಿಕ್ಷಕರಾದ ಶ್ರೀ ಮಹಾಬಲೇಶ್ವರ ಭಟ್ ಮಾದಕ ದ್ರವ್ಯ ವ್ಯಸನದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು. ಶಾಲಾ ದೈಹಿಕ ಶಿಕ್ಷಕ ಶಿವಸುಬ್ರಹ್ಮಣ್ಯ ಪ್ರಸಾದ್ ಮತ್ತು ಮಕ್ಕಳ ನೇತೃತ್ವದಲ್ಲಿ ಮಕ್ಕಳಿಗೆ ಜುಂಬಾ ಡ್ಯಾನ್ಸ್ ತರಬೇತಿಯನ್ನು ನೀಡಲಾಯಿತು.ಎಲ್ ಪಿ ಮತ್ತು ಯು ಪಿ ಮಕ್ಕಳಿಗೆ ಪ್ರತ್ಯೇಕ ತಂಡಗಳಾಗಿ ಜುಂಬಾ ಡ್ಯಾನ್ಸ್ ಪ್ರದರ್ಶನ ನಡೆಯಿತು.ವಾಚನಾ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಮೀಯಪದವು ಇದರ ನಿವೃತ್ತ ಮುಖ್ಯೋಪಾಧ್ಯಾಯರೂ ಉತ್ತಮ ವಾಗ್ಮೀ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ರಾಜಾರಾಮ್ ರಾವ್ ಮೀಯಪದವು ಭಾಗವಹಿಸಿ ಮಕ್ಕಳಿಗೆ ಓದಿನ ಮತ್ತು ಇತರ ವಿಚಾರಗಳ ಬಗ್ಗೆ ಕಥೆಗಳ ಮೂಲಕ ತಿಳುವಳಿಕೆಯನ್ನು ಮೂಡಿಸಿದರು.ಶಾಲಾ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಶಾಲ ಸಂಪನ್ಮೂಲ ತಂಡಗಳ ಸಂಚಾಲಕರಾದ ಸುನಿಲ್ ಕುಮಾರ್ ಯಂ ಮತ್ತು ಶ್ರೀಲಕ್ಷ್ಮಿ ಶುಭಾಶಂಸನೆಗೈದರು.ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ರಾಮಚಂದ್ರ ಕೆ ಯಂ ಮುಖ್ಯ ಅತಿಥಿಗಳಾದ ರಾಜರಾಮ್ ರಾವ್ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ವಾಚನಾ ಸಪ್ತಾಹದಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಲೈಬ್ರೆರಿ ಸಂಚಾಲಕಿ ಪ್ರತಿಭಾಶ್ರೀ ಕೆ ಮತ್ತು ಎಲ್ಲಾ ಕ್ಲಬ್ ಗಳ ಸಂಚಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಸುನಿಲ್ ಕುಮಾರ್ ಯಂ ಸ್ವಾಗತಿಸಿ ಅಧ್ಯಾಪಿಕೆ ಶ್ರೀಲಕ್ಷ್ಮಿ ಧನ್ಯವಾದವಿತ್ತರು. ಶಿಕ್ಷಕ ರಘುವೀರ್ ರಾವ್ ಮತ್ತು ಶಿಕ್ಷಕಿ ಅರ್ಪಿತಾ ನಿರೂಪಿಸಿದರು.
0 Comments