ಕುಂಬಳೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕುಂಬಳೆ ವಲಯದ ಆಶ್ರಯದಲ್ಲಿ ಕುಂಬಳೆ ಜಿಯುಪಿಎಸ್ ಶಾಲೆಯಲ್ಲಿ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಜರಗಿತು. ಪತ್ರಕರ್ತ ಎಂ. ನಾ. ಚಂಬಲ್ತಿಮಾರ್ ಕಾರ್ಯ ಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕುಂಬಳೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಪುಣಿಯೂರು , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುಂಬಳೆ ವಲಯ ಮೇಲ್ವಿಚಾರಕ ಅಭಿಷೇಕ್, ಒಕ್ಕೂಟದ ಅಧ್ಯಕ್ಷ ಮುರಳೀಧರ ಯಾದವ್, ಕಂಚಿಕಟ್ಟೆ ಒಕ್ಕೂಟ ಅಧ್ಯಕ್ಷೆ ಕಸ್ತೂರಿ ಉಪಸ್ಥಿತರಿದ್ದು ಮಾತನಾಡಿದರು.
ಬಾಲಕೃಷ್ಣ ಸಂಘದ ನೇತೃತ್ವದಲ್ಲಿ ಆಯೋಜಿಸಿದ ಸಭೆಯಲ್ಲಿ ಸಂಘದ ಪ್ರತಿನಿಧಿ ಸುಜಾತ ಉಪಸ್ಥಿತರಿದ್ದರು. ಸಂಧ್ಯಾ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು. ಹಲವು ಸಂಘ ಪ್ರತಿನಿಧಿಗಳು ಪಾಲ್ಗೊಂಡರು.
0 Comments