ಕಾಸರಗೋಡು: ಚೆರ್ಕಳ ಬಳಿಯ ಪೊವ್ವಲ್ ನಲ್ಲಿ ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಫಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಪೊವ್ವಲ್ ನಿವಾಸಿ ಕಬೀರ್(42) ಮೃತಪಟ್ಟವರು. ಇಂದು (ಸೋಮವಾರ) ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಕಬೀರ್ ಅವರು ಪೊವ್ವಲ್ ಎಲ್.ಬಿ.ಎಸ್. ಇಂಜಿನಿಯರಿಂಗ್ ಕಾಲೇಜು ಬಳಿ ನೂತನ ಮನೆ ನಿರ್ಮಿಸಿದ್ದು ಅದರ ನಿನ್ನೆ (ಆದಿತ್ಯವಾರ) ಗೃಹಪ್ರವೇಶ ನಡೆದಿತ್ತು. ಇಂದು ಬೆಳಗ್ಗೆ ಅವರು ಮನೆಯಿಂದ ಬೋವಿಕಾನ ಭಾಗಕ್ಕೆ ಹೊರಟಾಗ ಅವರ ಬೈಕು ಮುಳ್ಳೇರಿಯ ಭಾಗದಿಂದ ಬರುತ್ತಿದ್ದ ಇನ್ನೊಂದು ಬೈಕಿಗೆ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಕಬೀರ್ ನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಧ್ಯೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಸುಹರಾಬಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ
0 Comments