Ticker

6/recent/ticker-posts

ಉಪ್ರಳ್ಳಿ ಬಾರ್ಕೂರ್ ಗಳಲ್ಲಿ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ ವ್ರತಸಂಕಲ್ಪ ಯಾತ್ರೆ

 


ಉಡುಪಿ : ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆಯ ಭಾಗವಾಗಿ ಜಗದ್ಗುರು ಆನೆಗುಂದಿಶ್ರೀಗಳವರು ಉಪ್ರಳ್ಳಿ ಕರಸ್ಥಳ ಶ್ರೀ ಜಗದ್ಗುರು ನಾಗಲಿಂಗ ಸ್ವಾಮೀ ಶ್ರೀ ಕಾಳಿಕಾಂಬಾ ದೇವಸ್ಥಾನ ಸಂದರ್ಶಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ,ಮೊಕ್ತೇಸರರಾದ ಉದಯ ಆಚಾರ್ಯ ಕಟ್ಬೆಲ್ತೂರು,ಶ್ರೀಧರ ಆಚಾರ್ಯ ಮರವಂತೆ,ಮಾಜಿ ಮೊಕ್ತೇಸರರಾದ ವೆಂಕಟರಮಣ ಆಚಾರ್ಯ ಉಳ್ಳೂರು,ವೆಂಕಟೇಶ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೊಡ್ಲಾಡಿ ಪ್ರಭಾಕರ ಆಚಾರ್ಯ, ವಿವಿಧ ಸಮಿತಿಗಳ ಮುಖ್ಯಸ್ಥರಾದ ಶೈಲಾ ರಾಮಕೃಷ್ಣ ಆಚಾರ್ಯ,ಅಶೋಕ್ ಆಚಾರ್ಯ ನಾವುಂದ,ದಿನೇಶ್ ಆಚಾರ್ಯ ಮರವಂತೆ, ಬ್ರಹ್ಮಶ್ರೀ ಗಣೇಶ್ ಪುರೋಹಿತ್, ಬ್ರಹ್ಮಶ್ರೀ ಹರೀಶ್ ಪುರೋಹಿತ್  ಸೇರಿದಂತೆ  ಮಹಿಳಾ ಸಮಿತಿ, ಸೇವಾಸಮಿತಿ, ಜೀರ್ಣೋದ್ಧಾರ ಸಮಿತಿ, ಎಜುಕೇಶನಲ್ ಟ್ರಸ್ಟ್ ಪದಾಧಿಕಾರಿಗಳು ಜಗದ್ಗುರುಗಳವರನ್ನು ಬರಮಾಡಿಕೊಂಡರು.


ಚಾತುರ್ಮಾಸ್ಯ ವ್ರತ ಸಂಕಲ್ಪ ಯಾತ್ರೆಯ ಭಾಗವಾಗಿ ಜಗದ್ಗುರು ಆನೆಗುಂದಿಶ್ರೀಗಳವರು ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನವನ್ನು  ಸಂದರ್ಶಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ವಿ ಶ್ರೀಧರ ಆಚಾರ್ಯ ಒಡೆಯರ ಹೋಬಳಿ,ಮೊಕ್ತೇಸರರಾದ ಪ್ರವೀಣ ಆಚಾರ್ಯ ರಂಗನಕೆರೆ ,ಸುಬ್ರಾಯ ಆಚಾರ್ಯ ಮಾನವರು, ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮಿಕಾಂತ ಶರ್ಮ, ಬ್ರಹ್ಮಶ್ರೀ ಪ್ರಕಾಶ್ ಪುರೋಹಿತ್ , ಆಡಳಿತ ಮಂಡಳಿ, ಮಹಿಳಾ ಮಂಡಳಿಗಳು, ಯುವಕ ಸೇವಾದಳ  ಪದಾಧಿಕಾರಿಗಳು ಜಗದ್ಗುರುಗಳವರನ್ನು ಬರಮಾಡಿಕೊಂಡರು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ  ಪ್ರತಿನಿಧಿಗಳಾಗಿ ಉಪ್ರಳ್ಳಿ ಮತ್ತು ಬಾರ್ಕೂರು ದೇವಸ್ಥಾನಗಳಲ್ಲಿ ಸುಧಾಕರ ಆಚಾರ್ಯ ತ್ರಾಸಿ , ಶ್ರೀ ಜಿ.ಟಿ ಆಚಾರ್ಯ  ಮುಂಬೈ ಮೂಲ್ಕಿ, ಶ್ರೀ ಕನ್ಯಾನ ಜನಾರ್ಧನ ಆಚಾರ್ಯ, ಶ್ರೀ ಜಯಕರ ಆಚಾರ್ಯ ಕರಂಬಳ್ಳಿ, ಶ್ರೀ ಯೋಗೀಶ್ ಆಚಾರ್ಯ ಕರಂಬಳ್ಳಿ,  ಶಾಲಿನಿ ಜಯಕರ ಆಚಾರ್ಯ,ಕೆಮ್ಮಣ್ಣು ಗಣೇಶ್ ಆಚಾರ್ಯ,  ರತ್ನಾಕರ ಆಚಾರ್ಯ   ಉದ್ಯಾವರ, ಡಾ. ಗೋಪಾಲಕೃಷ್ಣ ಆಚಾರ್ಯ ನವದೆಹಲಿ, ಲೋಲಾಕ್ಷ ಶರ್ಮಾ ಪಡುಕುತ್ಯಾರು, ಬ್ರಹ್ಮಶ್ರೀ ಕೇಶವ ಶರ್ಮಾ ಇರುವೈಲು, ವಿಶ್ವನಾಥ ಆಚಾರ್ಯ ಕಿದಿಯೂರು ಭಾಗವಹಿಸಿದ್ದರು.

Post a Comment

0 Comments