ಕಾಸರಗೋಡು: ದೇಶದ ಅಭಿವೃದ್ದಿ ಹಾಗೂ ಜನರ ಸುರಕ್ಷೆಯನ್ನು ಬಿಜೆಪಿ ಮುಂದಿಡುತ್ತಿದೆಯೆಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದರು. ಅವರು ಬಿಜೆಪಿ ಜಿಲ್ಲಾ ನೇತೃತ್ವ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಈ ರೀತಿ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರೀ ಅಭಿವೃದ್ದಿ ಉಂಟಾಗಿದೆ. ಆದರೆ ಕೇರಳದಲ್ಲಿ ಅಭಿವೃದ್ಧಿಯ ಬದಲು ವಿವಾದ ಮಾತ್ರ ಉಂಟಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ನೇತೃಎ ಐಕ್ಯರಂಗ ಬೆಂಬಲ ನೀಡುತ್ತಿದೆ. ನಿಲಂಬೂರು ಉಪಚುನಾವಣೆಯಲ್ಲಿ ಅಭಿವೃದ್ದಿಯ ಬದಲು ಬಾವನಾತ್ಮಕ ವಿಷಯಗಳು ಚರ್ಚೆಗೆ ತರಲು ಯತ್ನ ನಡೆಯಿತು ಎಂದವರು ಹೇಳಿದರು.
ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ಮುಂದಾಳುಗಳಾದ ವಿ.ಕೆ.ಸಜೀವನ್, ಜಿ.ಕಾಶಿನಾಥ್, ಪಿ.ಆರ್.ಸುನಿಲ್, ಮನುಲಾಲ್ ಮೇಲತ್, ಎನ್.ಬಾಬುರಾಜ್ ಮೊದಲಾದವರು ಮಾತನಾಡಿದರು
0 Comments