Ticker

6/recent/ticker-posts

ಫಾದರ್ ಮೃತದೇಹ ಪ್ರಾರ್ಥನಾಲಯದ ಬಳಿಯ ವಸತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ‌ ಪತ್ತೆ


 ಕಾಸರಗೋಡು: ವಾರದಲ್ಲಿ ಒಂದು ದಿನ ಮಾತ್ರ ಪ್ರಾರ್ಥನೆ ನಡೆಯುವ ಪ್ರಾರ್ಥನಾಲಯದ ಬಳಿಯ ಮನೆಯಲ್ಲಿ ಫಾದರ್ ಓರ್ವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಂಬಲತ್ತರ ಎಂ.ಸಿ.ಬಿ.ಸಿ. ಕೃಪಾ ನಿಲಯದಲ್ಲಿನ ಫಾದರ್ ಜಿಂಟೋ ಜೋಸೆಫ್ ಆಂಟಣಿ(44) ಮೃತಪಟ್ಟವರು. ಇಂದು (ಶುಕ್ರವಾರ) ಬೆಳಗ್ಗೆ ಮೃತದೇಹ ಕಂಡು ಬಂದಿದೆ.  ಆದಿತ್ಯವಾರ ಮಾತ್ರ ಇಲ್ಲಿ ಪ್ರಾರ್ಥನೆ ನಡೆಯಿತ್ತಿದೆ. ಇವರಲ್ಲದೆ ಇನ್ನೋರ್ವ ಫಾದರ್ ಸಹ ಇಲ್ಲಿ ವಾಸವಾಗಿದ್ದಾರೆ. ಅಂಬಲತ್ತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

Post a Comment

0 Comments