Ticker

6/recent/ticker-posts

ಸೀತಾಂಗೋಳಿ ಮದ್ಯದಂಗಡಿ ಬಳಿ‌ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರ ಬಂಧನ


 ಸೀತಾಂಗೋಳಿ: ಇಲ್ಲಿನ ಮದ್ಯದಂಗಡಿ ಬಳಿ   ಪೊಲೀಸರ ಮೇಲೆ ಹಲ್ಲೆಗೈದ ಇಬ್ಬರು ಯುವಕರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಾಯ್ಕಾಪು ನಿವಾಸಿ ಋತ್ವಿಕ್(25), ಬೇಳ ಪೆರಿಯಡ್ಕ ನಿವಾಸಿ ಹರೀಶ್ (45) ಬಂಧಿತ ಆರೋಪಿಗಳು. ಇವರೀರ್ವರು ಸೀತಾಂಗೋಳಿ ಮದ್ಯದಂಗಡಿ ಬಳಿ ಪರಸ್ಪರ ಜಗಳವಾಡುತ್ತಿದ್ದರು. ಈ ಮಾಹಿತಿ ತಿಳಿದು ಆಗಮಿಸಿದ ಮುಹಮ್ಮದ್ ಫಹರ್ ಎಂಬ ಪೊಲೀಸ್ ಅಧಿಕಾರಿ ಇಬ್ಬರ ಜಗಳ ಬಿಡಿಸಲು ಯತ್ನಿಸಿದರೆನ್ನಲಾಗಿದೆ. ಪೊಲೀಸರನ್ನು ಕಂಡ ಕೂಡಲೇ ಇಬ್ಬರು ಆರೋಪಿಗಳು ಜಗಳ ಬಿಟ್ಟು ಒಟ್ಟು ಸೇರಿ ಪೊಲೀಸನ ಮೇಲೆ ಹಲ್ಲೆಗೈದರು. ಈ ಮಾಹಿತಿ ತಿಳಿದು ಕುಂಬಳೆ ಠಾಣೆಯಿಂದ ಇನ್ನಷ್ಟು ಪೊಲೀಸರು ಆಗಮಿಸಿ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದು ರಿಮಾಂಡ್ ವಿಧಿಸಲಾಗಿದೆ

Post a Comment

0 Comments