ಮಂಗಳೂರು: ಕಾಸರಗೋಡು ಜಿಲ್ಲಾ ಬಂಟರ ಸಂಘದ ವತಿಯಿಂದ ನಾಯ್ಕಾಪಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಂಗಣ ಕಟ್ಟಡ ಸಮುಚ್ಚಯದ ರೂಪುರೇಶೆಗಳ ಬಗ್ಗೆ ಚರ್ಚಿಸಲು ಕಟ್ಟಡ ಸಮಿತಿಯ ಸಭೆಯು ಮಂಗಳೂರಿನ ಹೋಟೆಲ್ ಕ್ವಾಲಿಟಿಯ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ.ಸುಬ್ಬಯ್ಯ ರೈ ಅಧ್ಯಕ್ಷತೆ ವಹಿಸಿದರು. ಉದ್ಯಮಿ, ಕಟ್ಟಡ ಸಮಿತಿ ಅಧ್ಯಕ್ಷ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರು ಉದ್ಘಾಟಿಸಿದರು. ಕಟ್ಟಡ ಸಮಿತಿ ಗೌರವಾಧ್ಯಕ್ಷ ಕೆ.ಕೆ.ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಜಿಲ್ಲಾ ಕಾರ್ಯದರ್ಶಿ ಮೋಹನ್ ರೈ ಕಯ್ಯಾರು ಸ್ವಾಗತಿಸಿದರು ಶ್ಯಾಮಲ ಶೆಟ್ಟಿ ವಂದಿಸಿದರು. ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳು, ಫಿರ್ಕಾ ಪದಾಧಿಕಾರಿಗಳು, ಪಂಚಾಯತು ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು ಸಲಹೆ, ಸೂಚನೆಗಳನ್ನು ನೀಡಿದರು
0 Comments