Ticker

6/recent/ticker-posts

ಬೀರಂತಬೈಲಿನಲ್ಲಿ ಅಮೃತ್ 2:0 ಯೋಜನೆಯಿಂದ ಸಮಸ್ಯೆಯ ವಿಷವುಣ್ಣುತ್ತಿರುವ ನಾಗರಿಕರು

 


ಕಾಸರಗೋಡು : ಸರಕಾರ ಒಂದು ಯೋಜನೆ ಜ್ಯಾರಿಗೊಳಿಸಿದರೆ ಅದು ಸಾರ್ಥಕವಾಗಬೇಕು ಇಲ್ಲದಿದ್ದಲ್ಲಿ ಇದು ನಾಡಿಗೂ ಅಪ್ರಯೋಜಕ ನಾಗರಿಕರಿಗೂ ಸಮಸ್ಯೆ. ಇಂತಹ ಒಂದು ಗಂಭೀರ ಸಮಸ್ಯೆ ಕಳೆದ ಒಂದೂವರೆ ವರ್ಷಗಳಿಂದ ಪರಿಹಾರ ಕಾಣದೆ ಇರುವಾಗ ಇದನ್ನು ಪ್ರತಿಭಟಿಸಿ ಪುರಸಭೆಯ ಕೌನ್ಸಿಲರ್ ಒರ್ವರು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. 


ಕಾಸರಗೋಡಿನ ನಗರ ಸಭೆ 33 ವಾರ್ಡಿನ ಬೀರಂತಬೈಲ್ ನಲ್ಲಿ ಅಮೃತ್ 2:0 ಕುಡಿನೀರು ಯೋಜನೆ ಜ್ಯಾರಿಗೊಳಿಸಲಾಗಿತ್ತು. ಇದಕ್ಕಾಗಿ ರಸ್ತೆ ಬದಿ ಅಗೆದು ಪೈಪ್ ಅಳವಡಿಸಲಾಗಿದ್ದು ಇದನ್ನು ಸಮರ್ಪಕವಾಗಿ ಮುಚ್ಚದ ಕಾರಣ ಈ ರಸ್ತೆಯ ಮೂಲಕ ನಡೆದಾಡುವ ದಾರಿಹೋಕರಿಗೂ ಸಾಗುವ ವಾಹನಗಳಿಗೂ ಸಂಕಷ್ಟಮಯ ಪರಿಸ್ಥಿತಿ ಇದಿರಾಗಿದೆ. ಅಲ್ಲಲ್ಲಿ ಅಪೂರ್ಣ ಪೈಪ್ ಲೈನ್  ಹೊಂಡಗಳನ್ನು ತೋಡಲಾಗಿದ್ದು ಇದನ್ನು ಮುಚ್ಚಲಾಗಲಿಲ್ಲ. ಇಂತಹ ಮಾರಕ ಹೊಂಡಗಳಿಗೆ ಬಿದ್ದು ಹಲವು ದ್ವಿಚಕ್ರ ವಾಹನಗಾರರು, ಪಾದಚಾರಿಗಳು ಕೈ ಕಾಲು ಮುರಿದುಕೊಂಡ ಹಲವು ನಿದರ್ಶನಗಳಿವೆ. ಹೊಂಡ ಗುಂಡಿಯ ಈ ರಸ್ತೆಯಲ್ಲಿ ರಿಕ್ಷಾ ಚಾಲಕರಂತೂ ಇತ್ತ ಸುಳಿಯದ ಕಾರಣ ವೃದ್ಧರು ಶಾಲಾ ಮಕ್ಕಳಿಗೂ ಪ್ರಯಾಣ ಕಷ್ಟಕರವಾಗಿದೆ. 

ಕಳೆದ ಒಂದೂವರೆ ವರ್ಷದ ಹಿಂದೆ ಆರಂಭಿಸಿದ ಅಮೃತ್ ಕುಡಿನೀರು ವಿತರಣಾ ಕಾಮಗಾರಿ ಇದುವರೆಗೂ ಪೂರ್ಣವಾಗಿಲ್ಲ. ಈ ಬಗ್ಗೆ ನಗರಸಭಾ ಸದಸ್ಯೆ ವಾರ್ಡ್ ಪ್ರತಿನಿಧಿ ವೀಣಾ ಅರುಣ್ ಶೆಟ್ಟಿ ಜಿಲ್ಲಾಧಿಕಾರಿಯವರಿಗೆ ನೇರಾ ದೂರು ಸಲ್ಲಿಸಿದ್ದಾರೆ.

Post a Comment

0 Comments