ಕಾಸರಗೋಡು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಾಸರಗೋಡು-ಮಂಜೇಶ್ವರ ತಾಲೂಕು,ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಾಸರಗೋಡು ಮಂಜೇಶ್ವರ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರವನ್ನು ಶ್ರೀ ಶಾರದಾಂಬ ಸಭಾಂಗಣ ಅಣಂಗೂರಿನಲ್ಲಿ ನಡೆಸಲಾಯಿತು.
ತರಬೇತಿ ಕಾರ್ಯಗಾರದ ಉದ್ಘಾಟನೆಯನ್ನು ಶ್ರೀ ರಾಜೀವನ್ ಪೊಲೀಸ್ ಅಧಿಕಾರಿ ಕಾಸರಗೋಡು ರವರು ದೀಪ ಬೆಳಗಿಸಿ ಕಳೆದ 5 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಶೌರ್ಯ ಸ್ವಯಂ ಸೇವಕರಿಗೆ ಶುಭ ಹಾರೈಸಿದರು.
ಶ್ರೀ ಬಾಬು ನಾಯ್ಕ ಎಸ್, ಜಿಲ್ಲಾ ನಿರ್ದೇಶಕರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾದ ಶ್ರೀ ಅಖಿಲೇಶ್ ನಗುಮುಗಂ, ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಕಾಸರಗೋಡು. ಶ್ರೀ ಜಯಪ್ರಕಾಶ್ ತೊಟ್ಟಿತ್ತೋಡಿ ಅಧ್ಯಕ್ಷರು ತಾಲೂಕು ಜನಜಾಗೃತಿ ವೇದಿಕೆ ಮಂಜೇಶ್ವರ. ಶ್ರೀ ವೆಂಕಟರಮಣ ಹೊಳ್ಳ ಅಧ್ಯಕ್ಷರು ತಾಲೂಕು ಭಜನಾ ಪರಿಷತ್ ಕಾಸರಗೋಡು ರವರು ತರಬೇತಿಯಲ್ಲಿ ಭಾಗವಹಿಸಿದ ಸ್ವಯಂ ಸೇವಕರಿಗೆ ಶುಭ ಹಾರೈಸಿದರು.
ಶ್ರೀ ವಿವೇಕ್ ಪಾಯಸ್ ಪ್ರಾದೇಶಿಕ ನಿರ್ದೇಶಕರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ರವರು ತರಬೇತಿ ಕಾರ್ಯಗಾರದಲ್ಲಿ ಮುಂದಿನ ದಿನಗಳಲ್ಲಿ ಹೇಗೆ ಕರ್ತವ್ಯ ನಿರ್ವಹಣೆ ಮಾಡುವುದು ಮತ್ತು ಉತ್ತಮ ಸಂಘಟನೆ ಬೆಳೆಸುವ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಜ್ಞಾನೇಶ್ ಆಚಾರ್ಯ, ಯೋಜನಾಧಿಕಾರಿ ಗಳಾದ ಶ್ರೀ ಮಾಧವ ಗೌಡ, ಶ್ರೀ ಜೈವಂತ್ ಪಟಗಾರ,ಶ್ರೀ ಗಣೇಶ್ ಆಚಾರ್ಯ, ಕಾಸರಗೋಡು ಮಂಜೇಶ್ವರ ತಾಲೂಕಿನ ಶೌರ್ಯ ಸಮಿತಿಯ ಮಾಸ್ಟರ್ ಗಳಾದ ಶ್ರೀ ಜಗದೀಶ್, ಶ್ರೀ ಪ್ರದೀಪ್ ಕಿರಣ್, ಕ್ಯಾಪ್ಟನ್ ಗಳಾದ ಶ್ರೀ ರವಿಕುಮಾರ್, ಶ್ರೀ ಸುರೇಂದ್ರರವರು ಉಪಸ್ಥಿತರಿದ್ದರು.
ತರಬೇತಿ ಕಾರ್ಯಗಾರದಲ್ಲಿ ಕಾಸರಗೋಡು ಮಂಜೇಶ್ವರ ತಾಲೂಕಿನ ಶೌರ್ಯ ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು.
ಕಾಸರಗೋಡು ತಾಲೂಕು ಕ್ಷೇತ್ರ ಯೋಜನಾಧಿಕಾರಿ ಶ್ರೀ ದಿನೇಶ್ ಸ್ವಾಗತಿಸಿ, ಮಂಜೇಶ್ವರ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುವರ್ಣ, ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ ನಿರೂಪಿಸಿದರು .
0 Comments