ಬದಿಯಡ್ಕ : ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಸಹ ಘಟಕವಾದ ಮೊಗೇರ ಸಂಘ ಬದಿಯಡ್ಕ ಪಂಚಾಯತು ಸಮಿತಿಯನ್ನು ರೂಪೀಕರಿಸಲಾಯಿತು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಜಿಲ್ಲಾಧ್ಯಕ್ಷ ನಿಟ್ಟೋಣಿ ಬಂದ್ಯೋಡು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಂಚಾಯತು ಕಾರ್ಯಕಾರೀ ಸಮಿತಿಗೆ ಗಂಗಾಧರ ಗೋಳಿಯಡ್ಕ ( ಅಧ್ಯಕ್ಷರು ), ಶಂಕರ .ಡಿ.ದರ್ಬೆತ್ತಡ್ಕ ( ಕಾರ್ಯದರ್ಶಿ ) ಹಾಗೂ ಹನ್ನೊಂದು ಮಂದಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿ ಗೌರವಾಧ್ಯಕ್ಷ ರಾಮಪ್ಪ ಮಂಜೇಶ್ವರ , ಜಿಲ್ಲಾ ಕಾರ್ಯದರ್ಶಿ ಗೋಪಾಲ .ಡಿ, ಜಿಲ್ಲಾ ಸಮಿತಿಯ ಕೃಷ್ಣದಾಸ್ , ಜಯರಾಮಪ್ಪ , ಸುಧಾಕರ ಬೆಳ್ಳಿಗೆ ಉಪಸ್ಥಿತರಿದ್ದರು.
0 Comments