ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾಮೂಹಿಕ ಸಗ್ರಹ-ಸ್ವಯಂವರ ಪಾರ್ವತಿ ಯಾಗ ನಾಳೆ (ಜು.5) ಪ್ರಾತಃಕಾಲದಿಂದ ಆರಂಭಗೊಳ್ಳಲಿದೆ.
ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಹಾಗೂ ಶ್ರೀ ಕ್ಷೇತ್ರ ತಂತ್ರಿವರ್ಯರಾದ ಬಡಾಜೆ ಬೂಡು ಶ್ರೀ ಗೋಪಾಲಕೃಷ್ಣ ತಂತ್ರಿವರ್ಯರ ಆಶೀರ್ವಾದ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ವಾಸುದೇವ ಹೊಳ್ಳ ಇವರ ಪೌರೋಹಿತ್ಯದಲ್ಲಿ ಪ್ರಾತಃಕಾಲ ಗಂಟೆ 5.30ಕ್ಕೆ ಶ್ರೀ ಬಾಲಗಣಪತಿ ಹವನ,ಗಂಟೆ 8.00ರಿಂದ ನವಗ್ರಹ ಸಹಿತ ಸ್ವಯಂವರ ಪಾರ್ವತಿ ಯಾಗ ಪ್ರಾರಂಭ,11.00ಕ್ಕೆಯಾಗದ ಪೂರ್ಣಾಹುತಿ, ಪ್ರಸಾದ ವಿತರಣೆ,11.15ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನಗೈಯುವರು. ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿವರ್ಯರು ಬಡಾಜೆ ಬೂಡು ಉಪಸ್ಥಿತರಿರುವರು. ಯಾಗ ಸಮಿತಿ ಅಧ್ಯಕ್ಷರು ಅಧ್ಯಕ್ಷ ಶುಭಕರ ಶೆಟ್ಟಿ ತೋಟ ಅಧ್ಯಕ್ಷತೆವಹಿಸುವರು.ಡಾ| ರವೀಶ್ ಪಡುಮಲೆ ಧಾರ್ಮಿಕ ಭಾಷಣಗೈಯುವರು. ಹೇರಂಬ ಇಂಡಸ್ಟ್ರೀಸ್ ಮುಂಬಯಿಯ ಆಡಳಿತ ನಿರ್ದೇಶಕ ಡಾ। ಸದಾಶಿವ ಶೆಟ್ಟಿ ಕುಳೂರು,ಕನ್ಯಾನ,ಮುಂಡಪಳ್ಳರಾಜರಾಜೇಶ್ವರೀ ದೇವಸ್ಥಾನ ಆಡಳಿತ ಮೊಕೇಸರ ಕೆ. ಕೆ. ಶೆಟ್ಟಿ,ಕರ್ನಾಟಕ ಸರಕಾರ ಧಾರ್ಮಿಕದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕಳ ಮಲಾರ್‌ಬೀಡು.ಮುಖ್ಯ ಅತಿಥಿಗಳಾಗಿರುವರು.
ಕಾರ್ಯಕ್ರಮವನ್ನು ವಿಶೇಷ ಚಾನೆಲ್ ನೇರ ಪ್ರಸಾರ ಮಾಡಲಿದೆ ಕೆಳಗಿನ ಲಿಂಕ್ ಒತ್ತಿ ಸಬ್ ಸ್ಕ್ರೈಬ್ ಮಾಡಿಕೊಳ್ಳಿ
https://youtube.com/@visheshachannel9405?si=rh6qKjh9eaUVdxHkಮಂಗಲ್ಪಾಡಿ ಗ್ರಾ. ಪಂ.ಸದಸ್ಯೆ ರೇವತಿ ಕಮಲಾಕ್ಷ,ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ವಿಶ್ವಸ್ಥ ಮಂಡಳಿ ಸದಸ್ಯ ಶಶಿಧರ ಶೆಟ್ಟಿ ಗ್ರಾಮಚಾವಡಿ,ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು,ಖ್ಯಾತ ಬಹುಬಾಷಾ ಚಲನಚಿತ್ರ ನಟ ಪೃಥ್ವಿ ಅಂಬಾರು,ಅಂಬಾರು ಶ್ರೀ ಸದಾಶಿವ ದೇವಸ್ಥಾನ ಆಡಳಿತ ಮೊಕೇಸರ ಎಚ್.ಕುಂಞಣ್ಣ ಶೆಟ್ಟಿ,ಸಜೇಶ್ ಪೊದುವಾಳ್ ಕುಂಬಳೆ,ಡಾ| ಕೌಶಿಕ್ ಶೆಟ್ಟಿ,ವಿಜಯ ಕುಮಾರ್ ಕೆ.ಆರ್.ನಾರಾಯಣ ಪೂಜಾರಿ ಅಮೆತ್ತೋಡು, ಶ್ರೀಧರ ಪಂಜ,ಪ್ರಶಾಂತ್ ವಾನಂದ ಶಿರಿಯ, ರೇಷ್ಮಾ ಗಣೇಶ್ ರೈ ಬೆಂಗಳೂರು, ಶುಭಾಶಂಸನೆಗೈಯುವರು. ಬಾಲಕೃಷ್ಣ ವೈದ್ಯರು,ಉದ್ಯಮಿ ವಿಜಯ ಕುಮಾರ್ ಕೃಷ್ಣನಗರ, ವೀರೇಂದ್ರ ಐಲ ಅವರನ್ನು ಸನ್ಮಾನಿಸಲಾಗುತ್ತದೆ.
0 Comments