Ticker

6/recent/ticker-posts

ಕಮ್ಯೂನಿಷ್ಟರ ರಾಜಕೀಯ ದ್ವೇಷಕ್ಕೆ ಎರಡೂ ಕಾಲುಗಳನ್ನು ಕಳಕೊಂಡ ಕೂತುಪರಂಬದ ಬಿಜೆಪಿ‌ನೇತಾರ ಸಿ.ಸದಾನಂದನ್ ಮಾಸ್ತರ್ ರಾಜ್ಯಸಭೆಗೆ ನೇಮಕ


 ನವದೆಹಲಿ: ಹಿರಿಯ ಬಿಜೆಪಿ ನೇತಾರ, ಆರ್.ಎಸ್.ಎಸ್.ಸ್ವಯಂಸೇವಕ ಸಿ.ಸದಾನಂದನ್ ಮಾಸ್ತರ್ ಅವರನ್ನು ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಳಿಸಲಾಗಿದೆ. ಸದಾನಂದನ್ ಮಾಸ್ತರ್ ಅಲ್ಲದೆ ವಕೀಲರಾದ ಉಜ್ವಲ್ ನಿಗಂ, ಮಾಜಿ ವಿದೇಶ ಸಚಿವ ಹರ್ಷ ವರ್ದನ್ ಶುಕ್ಲ, ಇತಿಹಾಸ ತಜ್ಞೆ ಮೀನಾಕ್ಷಿ ಜಯಿನ್ ಎಂಬಿವರನ್ನು ಸಹ ರಾಷ್ರ್ಟಪತಿಯವರು ರಾಜ್ಯ ಸಭಾ ಸದಸ್ಯರಾಗಿ ನೇಮಕಗೊಳಿಸಿದ್ದಾರೆ. 

ಕಣ್ಣೂರು ಕೂತುಪರಂಬ ನಿವಾಸಿಯಾದ ಸದಾನಂದನ್ ಮಾಸ್ತರ್ ಅವರು 1994 ರಲ್ಲಿ ಕಮ್ಯೂನಿಷ್ಟರ ಕ್ರೌರ್ಯಕ್ಕೆ ತನ್ನ ಎರಡೂ ಕಾಲುಗಳನ್ನು ಕಳಕೊಂಡವರು. ಈ ಹಿಂದೆ ಚಲನಚಿತ್ರ ನಟ ಸುರೇಶ್ ಗೋಪಿ, ಅಥ್ಲೆಟಿಕ್ ತಾರೆ ಪಿ.ಟಿ.ಉಷಾ ಎಂಬಿವರನ್ನು ರಾಜ್ಯಸಭೆಗೆ ನೇಮಕಗೊಳಿಸಲಾಗಿತ್ತು. ಸದಾನಂದನ್ ಮಾಸ್ತರ್ ಇದೀಗ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.

Post a Comment

0 Comments