Ticker

6/recent/ticker-posts

Ad Code

ಮಾಸ್ಟರ್ಸ್ ಮೀಯಪದವು ಇದರ 14ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ ಕಾರ್ಯಕ್ರಮ


ಮೀಯಪದವು: ಮಾಸ್ಟರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಮೀಯಪದವು ಇದರ 14ನೇ ವಾರ್ಷಿಕೋತ್ಸವ ಹಾಗೂvಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ ಸಮಾರಂಭ ಕಾರ್ಯಕ್ರಮ ಮೀಯಪದವು ವಿದ್ಯಾವರ್ಧಕ ಶಾಲೆಯರಾಮಕೃಷ್ಣ ರಾವ್ ವೇದಿಕೆಯಲ್ಲಿ ಜರಗಿತು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಕೆ.ವಿ ರಾಧಾಕೃಷ್ಣ ಭಟ್ ವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯ

ಅತಿಥಿಗಳಾಗಿ ಆಗಮಿಸಿದ ವಿ.ಎ.ಯು.ಪಿ. ಶಾಲೆಯ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್. ಎಂ.ವಾಗ್ನಿ ಅಕ್ಷತ ಪ್ರದೀಪ್,ನಿವೃತ್ತ ಅಧ್ಯಾಪಕರಾದ ದಾಮೋದರಮಾಸ್ತರ್ ಕಬ್ಬಿನಹಿತ್ತಿಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕ್ಲಬ್ ಅಧ್ಯಕ್ಷರಾದ ಕೃಷ್ಣ ಪ್ರಸನ್ನ ಹಾಗೂ ಗೌರವ ಸಲಹೆಗಾರರಾದ ಜನಾರ್ಧನ.ಎಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಎಲ್ಲಾವಿಷಯಗಳಲ್ಲಿ A+ ಶ್ರೇಣಿ ಪಡೆದ ಶ್ರೀ ಆದ್ಯ ಎಸ್ ಎನ್, ಗಣೇಶ್ ಶರ್ಮ, ದಿಶಾ ಲಕ್ಷ್ಮಿ ಎಂ ಬಿ, ಆದ್ಯಾಶ್ರೀಎಂ,ಜ್ಯೋತಿಕಾ, ಎಂ ಸ್ತುತಿ, ಯುಕ್ತಿ ಶೆಟ್ಟಿ, ವಿ ಮೇಘ, ಶ್ರೀಶ ಕೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಜಯಪ್ರದಾ, ಲಿಖಿತಾ ಎಂ ಎಸ್, ನಂದನಾ ಪಿ ಎಸ್ ಹಾಗೂ ಐಶ್ವರ್ಯ ಇವರನ್ನು ಶಾಲು

ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ನಂತರ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ರಘುವೀರ್ ರಾವ್ ನಡೆಸಿಕೊಟ್ಟರು. ಕಾರ್ಯಕ್ರಮವನ್ನುಪುಷ್ಪರಾಜ್ ಶೆಟ್ಟಿ ಸ್ವಾಗತಿಸಿ,ಕಿರಣ್ ಕುಮಾರ್ ಚಂಡಿತೋಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಅಧ್ಯಾಪಕರಾದ ಬ್ರಿಜೇಶ್ ಎಂ ಪ್ರಾರ್ಥನೆ ಹಾಡಿದರು.

Post a Comment

0 Comments