Ticker

6/recent/ticker-posts

ಕೇರಳ ಕೋ-ಒಪರೇಟಿವ್ ಎಂಪ್ಲಾಯಿಸ್ ಯೂನಿಯನ್ ಕುಂಬಳೆ ಏರಿಯಾ ಸಮ್ಮೇಳನ

 


ಕುಂಬಳೆ : ಕೇರಳ ಕೋ-ಒಪರೇಟಿವ್ ಎಂಪ್ಲಾಯಿಸ್ ಯೂನಿಯನ್ (CITU) ಕುಂಬಳೆ ಏರಿಯಾ ಸಮ್ಮೇಳನ ಕಾಂ.ವಿ.ಎಸ್ ಅಚ್ಚುತಾನಂದನ್ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಳೆಯಲ್ಲಿ KSKTU ಜಿಲ್ಲಾ ಕಾರ್ಯದರ್ಶಿ ಕೆ.ವಿ ಕುಂಞಿರಾಮನ್ ಉದ್ಘಾಟಿಸಿದರು.ಎಂ.ವಿಠಲ್ ರೈ ಅಧ್ಯಕ್ಷತೆ ವಹಿಸಿದ್ದರು.ಕೆ.ಜಯ ಕುಮಾರ್ ಸ್ವಾಗತಿಸಿದರು.ಸತೀಶ್ ಶೆಟ್ಟಿ ಹುತಾತ್ಮ ಠರಾವು,ಕೆ.ಪ್ರದೀಪ್ ಸಂತಾಪ ಠರಾವು ಮಂಡಿಸಿದರು.ಯೂನಿಯನ್ ಜಿಲ್ಲಾ ಅಧ್ಯಕ್ಷ ಕೆ.ಪ್ರಭಾಕರನ್ ಸಂಘಟನಾ ವರದಿ ಮಂಡಿಸಿದರು.ಏರಿಯಾ ಕಾರ್ಯದರ್ಶಿ ಕೆ.ಜಯಕುಮಾರ್  ವರದಿ ಮಂಡಿಸಿದರು, ಖಜಾಂಚಿ ಜಯಶ್ರೀ ಲೆಕ್ಕ ಪತ್ರ ಮಂಡಿಸಿದರು.ನೂತನ ಏರಿಯಾ ಸಮಿತಿ ಅಧ್ಯಕ್ಷರಾಗಿ ವಿಠಲ್ ರೈ, ಕಾರ್ಯದರ್ಶಿಯಾಗಿ ಕೆ.ಜಯಕುಮಾರ್, ಖಜಾಂಚಿಯಾಗಿ ಜಯಶ್ರೀ ಪಿ.ವಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Post a Comment

0 Comments