ಬದಿಯಡ್ಕ: ಕನ್ನೆಪ್ಪಾಡಿಯಲ್ಲಿ 30 ಕೋಲು ಆಳದ ಬಾವಿಗೆ ಬಿದ್ದ ಕೋಳಿಗಳನ್ನು ಅಗ್ನಿಶಾಮಕ ದಳ ಸಿಬಂದಿಗಳು ರಕ್ಷಿಸಿದ ಘಟನೆ ನಡೆದಿದೆ. ಕನ್ನೆಪ್ಪಾಡಿ ಅಬ್ದುಲ್ಲ ಕುಞ ಎಂಬವರ ಮನೆಯ ಪರಿಸರದ ಬಾವಿಗೆ, ಇವರು ಸಾಕುವ ಎರಡು ಕೋಳಿಗಳು ಬಿದ್ದಿವೆ.
ಕೋಳಿಗಳನ್ನು ಮೇಲಕ್ಕೆತ್ತಲು ಸಾಧ್ಯವಾಗದ ಕಾರಣ ಕಾಸರಗೋಡು ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅದರಂರೆ ಅಗ್ನಿಶಾಮಕ ದಳದ ಅಧಿಕಾರು ಜೆ.ಎ.ಅಭಯ್ ಬಾವಿಗಳಿದು ಕೋಳಿಗಳನ್ನು ಮೇಲಕ್ಕೆ ತಂದರು. ಅಗ್ನಿಶಾಮಕ ದಳ ಅಧಿಕಾರಿಗಳಾದ ವಿ.ಎನ್.ವೇಣುಗೋಪಾಲ್, ಕೆ.ಆರ್.ಅಜೇಶ್, ಜಿತಿನ್ ಕೃಷ್ಣ, ಎ.ರಾಜೇಂದ್ರನ್, ಶ್ರೀಜಿತ್ ಮೊದಲಾದವರು ಉಪಸ್ಥಿತರಿದ್ದರು

0 Comments