Ticker

6/recent/ticker-posts

ಬದಿಯಡ್ಕ ಸೇವಾ ಭಾರತಿ ವತಿಯಿಂದ ನಿವೃತ್ತ ಯೋಧ ಶ್ರೀ ಬಾಲಚಂದ್ರರಿಗೆ ಸ್ವಾತಂತ್ರ್ಯೋತ್ಸವ ದಂದು ಗೌರವಾರ್ಪಣೆ.


 ನೀರ್ಚಾಲುಸೇವಾ ಭಾರತಿ ಬದಿಯಡ್ಕ ಪಂಚಾಯತ್ ಘಟಕದ ವತಿಯಿಂದ ಕನ್ಯಪ್ಪಾಡಿ ಆಶ್ರಯ ಆಶ್ರಮದಲ್ಲಿ ನಿವೃತ್ತ ಯೋಧ ಶ್ರೀ ಬಾಲಚಂದ್ರರಿಗೆ ಗೌರವಾರ್ಪಣೆ ನೀಡಿ ಅಭಿನಂದಿಸಲಾಯಿತು.ಸೇವಾಭಾರತಿ ಕಾರ್ಯದರ್ಶಿ, ಬದಿಯಡ್ಕ ಖಂಡ್ ಚಾಲಕ್ ಹಾಗೂ ಆಶ್ರಮ ಕಾರ್ಯದರ್ಶಿ ಶ್ರೀ ರಮೇಶಕಳೇರಿ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶ್ರೀ ಪ್ರತೀಕ್ ಆಳ್ವ ಪೆರಡಾಲ ಮತ್ತು ಜಿಲ್ಲಾ ಸೇವಾ ಪ್ರಮುಖ್ ಶ್ರೀ ಮಂಜುನಾಥ ಕಾರ್ಲೆ ಮತ್ತು ಅಧ್ಯಕ್ಷ ,  ,ಪದಾಧಿಕಾರಿಗಳು ಸೇರಿ ಶಾಲು ಹೊದಿಸಿ ಹಣ್ಣುಹಂಪಲು ನೀಡಿ ಗೌರವಿಸಿ ಸನ್ಮಾನಿಸಲಾಯಿತು.ಮುಖ್ಯ ಅತಿಥಿ ಶ್ರೀ ಬಾಲಚಂದ್ರ,ಧ್ವಜಾರೋಹಣ ಮಾಡಿ ಸಂದರ್ಭೋಚಿತ ವಾಗಿ ಇತಿಹಾಸವನ್ನು ವಿಮರ್ಶಿಸಿ ಮಾತನಾಡಿದರು.ಶ್ರೀಮಂಜುನಾಥ ಕಾರ್ಲೆ ಸಂಘದ ಶತಾಬ್ದಿ ವರ್ಷದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಸೇವಾ ಭಾರತಿ ವತಿಯಿಂದ ಆಶ್ರಮ ನಿವಾಸಿ ಹಿರಿಯರಿಗೆ ಮದ್ಯಾಹ್ನದ ಅನ್ನದಾನವನ್ನು ಆಯೋಜಿಸಲಾಯಿತು.,ಅದೇ ರೀತಿ ಗೋವುಗಳಿಗೆ ಗೋ ಗ್ರಾಸ ನೀಡಲಾಯಿತು.    ಆರಂಭದಲ್ಲಿ ಶ್ರೀ ಗಣೇಶ್.ಬಿ ಸ್ವಾಗತಿಸಿ ,ಸಭೆಗೆ ಕೊಶಾಧಿಕಾರಿ ಶ್ರೀ ನರೇಂದ್ರ.ಬಿ.ಎನ್.ಧನ್ಯವಾದವಿನ್ನಿತ್ತರು.ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Post a Comment

0 Comments