Ticker

6/recent/ticker-posts

Ad Code

ನೀರ್ಚಾಲು ಏಣಿಯರ್ಪುವಿನಲ್ಲಿ ಬೀದಿ ನಾಯಿ ದಾಳಿ, 4 ವರ್ಷದ ಮಗು ಸಹಿತ 6 ಮಂದಿಗೆ ಗಾಯ


 ನೀರ್ಚಾಲು:  ಇಲ್ಲಿನ ಏಣಿಯರ್ಪು ಹಾಗೂ ಪರಿಸರಗಳಲ್ಲಿ ಬೀದಿನಾಯಿ 6 ಮಂದಿಗೆ ಕಚ್ಚಿದ ಘಟನೆ ನಡೆದಿದೆ. ಅಂಗನವಾಡಿ ನೌಕರೆ ಏಣಿಯರ್ಪು ನಿವಾಸಿ ಅಶ್ವಥಿ(48),  ಆಟೋ ಚಾಲಕ ಹರಿಹರನ್ ಅವರ ಪುತ್ರಿ  ನವನ್ಯ(4),  ಏಣಿಯರ್ಪು ಲೈಫ್ ವಿಲ್ಲಾದ ರುಸ್ವಾನ(19), ಪುತುಕ್ಕೋಳಿಯ ಪದ್ಮನಾಭ ಶೆಟ್ಟಿಯವರ ಪುತ್ರಿ ಶಾನ್ವಿ(10),  ಪುದುಕ್ಕೋಳಿ ಅಂಗನವಾಡಿ ಬಳಿಯ ಚಂದ್ರನ್(38), ಬದಿಯಡ್ಕ ಬಾಂಜತ್ತಡ್ಕ ಉನ್ನತಿಯ ಗಣೇಶ(31) ಎಂಬಿವರಿಗೆ ಬೀದಿ ನಾಯಿ ಕಡಿತ ಉಂಟಾಗಿದೆ. ನಿನ್ನೆ (ಸೋಮವಾರ) ಸಾಯಂಕಾಲ 5 ಗಂಟೆಗೂ ರಾತ್ರಿ 8  ಗಂಟೆಗೂ ಮಧ್ಯೆ ಬೀದಿ ನಾಯಿ ಕಡಿತ ಉಂಟಾಗಿದೆ. ಕೆಲವು ಸಾಕು ಮೃಗಗಳ ಮೇಲೂ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿದೆ. ಬೀದಿ ನಾಯಿ ದಾಳಿಯ ಹಿನ್ನೆಲೆಯಲ್ಲಿ ಏಣಿಯರ್ಪು ಪರಿಸರದಲ್ಲಿ ಭಯಾತಂಕ ಸೃಷ್ಟಿಯಾಗಿದೆ. ಇಲ್ಲಿನ ಲೈಫ್ ವಿಲ್ಲಾದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಮನೆಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ವಾಸಿಸುತ್ತಿದೆ ಎಂದು ದೂರಲಾಗಿದೆ. ಗಾಯಗೊಂಡ ನವನ್ಯ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಇತರರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಬೀದಿ ನಾಯಿಗಳ ನಿಗ್ರಹ ಕೂಡಲೇ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

Post a Comment

0 Comments