Ticker

6/recent/ticker-posts

ಐ.ಎನ್.ಟಿ.ಯು.ಸಿ ಆಟೋ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷರ ಮೃತದೇಹ ರೈಲು ಹಳಿಯಲ್ಲಿ ಪತ್ತೆ


 ಕಾಸರಗೋಡು: ಐ.ಎನ್.ಟಿ.ಯು.ಸಿ‌. ನೇತಾರನ ಮೃತದೇಹ ಪಡನ್ನಕ್ಕಾಡ್ ರೈಲ್ವೇ ಮೇಲ್ಸೇತುವೆಯ ಕೆಳಗೆ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಆಟೋ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ (INTUC), ನೀಲೇಶ್ವರ ಕೊಟ್ರಚ್ಚಾಲ್ ನಿವಾಸಿಯೂ ಆಗಿರುವ ವಜ.ವಿ.ಸುಧಾಕರನ್(61) ಮೃತಪಟ್ಟವರು. ನಿನ್ನೆ (ಸೋಮವಾರ) ರಾತ್ರಿ 8.30 ರ ವೇಳೆ ಇವರಿಗೆ ರೈಲು ಡಿಕ್ಕಿಯಾಯಿತೆನ್ನಲಾಗಿದೆ. ಇವರು ಚಲಾಯಿಸುವ ಆಟೋ ರಿಕ್ಷ ರೈಲು ಹಳಿಯ ಬಳಿಯಲ್ಲೇ ಪತ್ತೆಯಾಗಿದೆ. ಘಟನೆಯ ಅರ್ದ ಗಂಟೆ ಮೊದಲು ಇವರು ಗೆಳೆಯರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ 'ಎಲ್ಲರೂ ನನ್ನನ್ನು ಕ್ಷಮಿಸಿರಿ' ಎಂದಿದ್ದರು. ಪೊಲೀಸರ ಮೊಬೈಲಿಗಳಿಗೂ ಈ ಸಂದೇಶ ಕಳುಹಿಸಲಾಗಿತ್ತು. ಪೊಲೀಸರು ಸಂದೇಶದ ಜಾಡು ಹಿಡಿದು ತನಿಖೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಅವರಯ ಹೊಸದುರ್ಗ ಸೇವಾ ಸಹಕಾರಿ  ಬ್ಯಾಂಕ್ ನಿರ್ದೇಶಕ, ಕಾಞಂಗಾಡ್ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಎಂಬೀ ಹುದ್ದೆಗಳಲ್ಲಿ ಕಾರ್ಯಾಚರಿಸಿದ್ದರು. ಮೃತರು ಪತ್ನಿ ಪ್ರೀತಾ, ಮಕ್ಕಳಾದ ಪೃಥ್ವಿ, ಪ್ರಣವ್ ಹಾಗೂ ಸಹೋದರ ಸಹೋದರಿಯರನ್ನು ಅಗಲಿದ್ದಾರೆ

Post a Comment

0 Comments