Ticker

6/recent/ticker-posts

Ad Code

ಆಲ್ಟೊ ಕಾರಿನಲ್ಲಿ ಸಾಗಿಸುತ್ತಿದ್ದ 86.4 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ; ಓರ್ವನ ಸೆರೆ



ಮಂಜೇಶ್ವರ: ಆಲ್ಟೊ ಕಾರಿನಲ್ಲಿ ಸಾಗಿಸುತ್ತಿದ್ದ 86.4 ಲೀಟರ್ (480 ಪ್ಯಾಕೆಟ್) ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ಎಕ್ಸೈಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮದ್ಯ ಸಾಗಿಸುತ್ತಿದ್ದ ಕಾಸರಗೋಡು ಬೆದಿರಡ್ಕ ನಿವಾಸಿ ಸುರೇಶ್ ಬಿ.ಪಿ.ಎಂಬಾತನನ್ನು ಬಂಧಿಸಲಾಗಿದೆ. ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಶಿಜಿನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ‌ ಎಕ್ಸೈಸ್ ಅಧಿಕಾರಿಗಳಾದ ಜಿನು ಜೇಮ್ಸ್, ಜಿಜಿನ್ ಎಂ.ವಿ, ಬಾಬುರಾಜನ್, ಸಜಿತ್, ಸುನಿಲ್ ಕುಮಾರ್, ಕೆಮು ಯುನಿಟ್ ಅಧಿಕಾರಿಗಳಾದ ಸುರೇಶ್ ಬಾಬು, ದಿನೇಶನ್ ಕಂಡತ್ತುಲ್, ವಿಷ್ಣು ಸುಮೋದ್ ಎಂ.ವಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments