Ticker

6/recent/ticker-posts

Ad Code

ದೇಶದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಲವು ಬಾರಿ ಚುನಾವಣೆ ಬುಡಮೇಲು: ಬಿಜೆಪಿ ಜಿಲ್ಲಾ ನೇತೃತ್ವ ಸಭೆಯಲ್ಲಿ ಅಡ್ವ.ವಿ.ಕೆ.ಸಜೀವನ್ ವಾಗ್ದಾಳಿ


 ಕಾಸರಗೋಡು:  ದೇಶದಲ್ಲಿ ಕಾಂಗ್ರೆಸ್ ಪಕ್ಷವು ಹಲವು ಸಲ ಚುನಾವಣೆಯನ್ನು ಬುಡಮೇಲುಗೊಳಿಸಿದೆಯೆಂದು ಬಿಜೆಪಿ  ರಾಜ್ಯ ಸೆಲ್ ಸಂಯೋಜಕ ಅಡ್ವ.ವಿ.ಕೆ.ಸಜೀವನ್ ಹೇಳಿದ್ದಾರೆ. ಬಿಜೆಪಿ ಕಾಸರಗೋಡು ಜಿಲ್ಲಾ ನೇತೃತ್ವ ಸಭೆಯನ್ನು ಜಿಲ್ಲಾ ಕಾರ್ಯಾಲಯ ಶ್ಯಾಮ ಪ್ರಸಾದ್ ಮುಖರ್ಜಿ ಮಂದಿರದಲ್ಲಿ ಉದ್ಘಾಟಿಸಿ ಅವರು ಈ ರೀತಿ ಹೇಳಿದರು. ಚುನಾವಣೆ ಬುಡಮೇಲುಗೊಳಿಸಿದ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಅಸಿಂಧುಗೊಳಿಸಲಾಗಿತ್ತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷವು ಸೋಲಿಸಲು ಯತ್ನಿಸಿತ್ತು ಎಂದವರು ಹೇಳಿದರು.

ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು. ವಲಯ ಸಂಘಟನಾ ಕಾರ್ಯದರ್ಶಿ ಜಿ.ಕಾಶಿನಾಥನ್, ಸುಧಾಮ ಗೋಸಾಡ, ವಿಜಯ ಕುಮಾರ್ ರೈ, ಪಿ.ಆರ್.ಸುನಿಲ್, ಎನ್.ಬಾನುರಾಜ್, ಮನುಲಾಲ್ ಮೇಲತ್ ಮೊದಲಾದವರು ಮಾತನಾಡಿದರು



Post a Comment

0 Comments