Ticker

6/recent/ticker-posts

ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ 96 ಪವನು ಚಿನ್ನಾಭರಣ ವಶ, ಮುಂಬೈ ನಿವಾಸಿಯ ಸೆರೆ


 ಮಂಜೇಶ್ವರ: ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಸಾಗಿಸುತ್ತಿದ್ದ ದಾಖಲೆಗಳಿಲ್ಲದ 96 ಪವನು  (762 ಗ್ರಾಂ) ಚಿನ್ನಾಭರಣವನ್ನು ಮಂಜೇಶ್ವರ ಚೆಕ್ ಪೋಸ್ಟಿನಿಂದ ವಶಪಡಿಸಲಾಗಿದೆ.ಎಕ್ಸೈಸ್ ಅಧಿಕಾರಿಗಳು ಬಸ್ಸಿನಲ್ಲಿ ನಡೆಸಿದ ತಪಾಸಣೆಯಲ್ಲಿ  ಚಿನ್ನಾಭರಣ ವಶಪಡಿಸಲಾಗಿದ್ದು  ಇದಕ್ಕೆ ಸಂಬಂಧಪಟ್ಟಂತೆ ಮುಂಬೈ ನಿವಾಸಿ  ಮಜಾಸರ್ ಹುಸೈನ್ ಎಂಬಾತನನ್ನು ಬಂಧಿಸಲಾಗಿದೆ. ಎಕ್ಸೈಸ್ ಸರ್ಕಲ್ ಇನ್ಸ್ಪೆಕ್ಟರ್ ಜಿಜಿಲ್ ಕುಮಾರ್ ಕೆ.ಯು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇತರ ಅಧಿಕಾರಿಗಳಾದ ಜಿನು ಜೇಮ್ಸ್, ಮೊಯ್ದೀನ್ ಸಾದಿಖ್, ವಿಜಯನ್.ಸಿ,  ರಾಹುಲ್ ಟಿ, ಕೆಮು ಯುನಿಟ್ ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವ,  ಸುಬಿನ್ ಪಿಲಿಫ್, ಅಬ್ದುಲ್ ಅಸೀಸ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments