Ticker

6/recent/ticker-posts

Ad Code

ಕುಡಿಯಲು ನೀರು ಕೇಳಿ ಬಂದ ವ್ಯಕ್ತಿ ಯುವತಿಯ ಮೈಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಕೊಲೆ.


 ಯುವತಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ದಾರುಣ ಘಟನೆ ನಡೆದಿದೆ. ಕಣ್ಣೂರು ಕುಟ್ಯಾಚಲ್ ನಿವಾಸಿ ಪ್ರವೀಣ ಮೃತಪಟ್ಟ ಯುವತಿ. ಈಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ  ಜಿಜೇಶ್ ಗಂಭೀರ ಗಾಯಗಳೊಂದಿಗೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ನಿನ್ನೆ (ಬುದವಾರ) ಮದ್ಯಾಹ್ನ ಪ್ರವೀಣಳ ಮನೆಯಲ್ಲಿ ಈ ಘಟನೆ ನಡೆದಿದೆ.

   ಪ್ರವೀಣ ಹಾಗೂ ಜಿಜೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಪ ಕಾಲದಿಂದ ಇವರ ಮಧ್ಯೆ ಬಿರುಕು ಕಾಣಿಸಿಕೊಂಡಿತ್ತು. ನಿನ್ನೆ ಮದ್ಯಾಹ್ನ ಮನೆಗೆ ಆಗಮಿಸಿದ ಜಿಜೇಶ್, ಪ್ರವೀಣಳಲ್ಲಿ ಕುಡಿಯಲು ನೀರು ಬೇಕೆಂದು ಕೇಳಿದನೆನ್ನಲಾಗಿದೆ. ನೀರು ತರಲು ಮನೆಯೊಳಗೆ ಹೋದ ಪ್ರವೀಣಳ ಮೈಮೇಲೆ ಜಿಜೇಶ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಶಬ್ದ ಕೇಳಿ ಓಡಿ ಬಂದ ನೆರೆಮನೆಯವರು ಬೆಂಕಿ ನಂದಿಸಿ ಇಬ್ಬರನ್ನೂ ಆಸ್ಪತ್ರೆಗೆ ತಲುಪಿಸಿದರು. ಈ ವೇಳೆ ಪ್ರವೀಣ ಮೃತಪಟ್ಟಿದ್ದಾಳೆ

Post a Comment

0 Comments