ಏತಡ್ಕ: ಶ್ರೀಕೃಷ್ಣನ ಬಾಲ್ಯ ಲೀಲೆಗಳಿಂದ ಹಿಡಿದ ಬದುಕಿನ ಎಲ್ಲಾ ತತ್ವಾದರ್ಶಗಳು ಸಮಾಜದ ಇಂದಿನ ಸ್ಥಿತಿಗತಿಗೆ ಅತ್ಯಂತ ಮೌಲ್ಯಯುತವಾದುದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ತಿಳಿಸಿದರು. ಅವರು ಅಜ್ಜಿಮೂಲೆ ಜೈ ಗುರುದೇವ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ನಡೆದ 35ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಹರಿನಾರಾಯಣ ನಡುವಂತಿಲ್ಲಾಯ ಉದ್ಘಾಟಿಸಿದರು.
ಬಳಿಕ ಕುಣಿತ ಭಜನಾ ಕಾರ್ಯಕ್ರಮ, ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಜರಗಿತು.ಸಮಾರೋಪ ಸಮಾರಂಭದಲ್ಲಿ ಕೃಷ್ಣ ಭಟ್ ಅಜ್ಜಿಮೂಲೆ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಭೂ ಸೇನೆಯ ಮಾಜಿ ಸೈನಿಕ ಹವಲ್ದಾರ್ ಆಚಲ ಎಂ. ಜಿ. ಪುತ್ರಕ್ಕಳ, ಅಬಕಾರಿ ಇಲಾಖೆಯ ಜನಾರ್ದನ ಎನ್,ಜಿಲ್ಲಾ ಪಂ.ಸದಸ್ಯೆ ಶೈಲಜಾ ಭಟ್ ನಡುಮನೆ, ಚಂದ್ರಶೇಖರ ಒಂರ್ಬೊಡಿ, ಕ್ಲಬ್ಬಿನ ಅಧ್ಯಕ್ಷ ಮಹೇಶ್ ಅಜ್ಜಿಮೂಲೆ ಮೊದಲಾದವರು ಭಾಗವಹಿಸಿದ್ದರು.
ಕ್ಲಬ್ ಗೌರವಾಧ್ಯಕ್ಷ ಜಾನ್ ಕ್ರಾಸ್ತ ಸ್ವಾಗತಿಸಿ ರಾಜೇಶ್ ಅಜ್ಜಿಮೂಲೆ ವಂದಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ನಿರೂಪಿಸಿದರು.ಬಳಿಕ ರಾಗ ಸಂಗಮ ಬದಿಯಡ್ಕ ಇವರಿಂದ ಮ್ಯೂಸಿಕ್ ಜಂಕ್ಷನ್ ಎಂಬ ರಸಮಂಜರಿ ಕಾರ್ಯಕ್ರಮ ಜರಗಿತು.

0 Comments