Ticker

6/recent/ticker-posts

Ad Code

11 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿ ವಿದೇಶಕ್ಕೆ ಪಲಾಯನಗೈಯ್ಯಲು ಯತ್ನ; ಆರೋಪಿಯನ್ನು ಉತ್ತರಪ್ರದೇಶದ ವಿಮಾನ ನಿಲ್ದಾಣದಿಂದ ಬಂಧಿಸಿದ‌ ಮೇಲ್ಪರಂಬ ಪೊಲೀಸರು‌


 ಕಾಸರಗೋಡು: 11 ವರ್ಷದ ಬಾಲಕನಿಗೆ ಕಿರುಕುಳ ನೀಡಿ ವಿದೇಶಕ್ಕೆ ಪಲಾಯನಗೈಯ್ಯಲು ಯತ್ನಿಸಿದ ಆರೋಪಿಯನ್ನು ಮೇಲ್ಪರಂಬ ಪೊಲೀಸರು ಉತ್ತರಪ್ರದೇಶದ ಸನಾಲಿ ವಿಮಾನ ನಿಲ್ದಾಣದಿಂದ ಬಂಧಿಸಿದ್ದಾರೆ. ಪೆರುಂಬಳ ಕುದಿರಲ್ ನಿವಾಸಿ ಪಿ.ಅಬ್ದುಲ್ ಹಾರಿಸ್(41) ಬಂಧಿತ ಆರೋಪಿ. ಮೇಲ್ಪರಂಬ ಇನ್ಸ್ಪೆಕ್ಟರ್ ಎ.ಸಂತೋಷ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 ಜೂನ್ 29 ರಂದು ಆರೋಪಿ ಅಬ್ದುಲ್ ಹಾರಿಸ್, 11 ವರ್ಷದ ಬಾಲಕನಿಗೆ ಕಿರುಕುಳ ನೀಡಿದ್ದನು. ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಲೇರಿದಾಗ ಆರೋಪಿ ತಪ್ಪಿಸಿಕೊಂಡಿದ್ದನು. ಆರೋಪಿ ವಿದೇಶಕ್ಕೆ ಪಲಾಯನಗೈಯ್ಯಲು ಯತ್ನಿಸುತ್ತಿರುವ ವರದಿ ಹಿನ್ನೆಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟೀಸು ಹೊರಡಿಸಿ ಎಲ್ಲ ವಿಮಾನ ನಿಲ್ದಾಣಗಳಿಗೆ ವರದಿ ನೀಡಿದ್ದರು. ಅದರಂತೆ ಉತ್ತರಪ್ರದೇಶದ ಸನಾಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪಲಾಯನಗೈಯ್ಯಲು ಯತ್ನಿಸುವ ಮದ್ಯೆ ಆರೋಪಿಯನ್ನು ಬಂಧಿಸಲಾಗಿದೆ

Post a Comment

0 Comments