ಸಂತೋಷ್
ಪತ್ನಿಯ ಜತೆ ಅನೈತಿಕ ಸಂಬಂಧವಿದೆಯೆಂದು ಶಂಕಿಸಿ ಪತಿ ನೆರೆಮನೆಯ ಯುವಕನನ್ನು ಇರಿದು ಕೊಲೆಗೈದ ಘಟನೆ ನಡೆದಿದೆ. ಪಾಲಕ್ಕಾಡ್ ಕೊಯಿಞನಮಪಾರ ನಿವಾಸಿ ಸಂತೋಷ್(42) ಕೊಲೆಗೀಡಾದ ವ್ಯಕ್ತಿ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೆರೆಮನೆಯ ಆರುಚ್ಚಾಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಮಂಗಳವಾರ) ರಾತ್ರಿ ಈ ಘಟನೆ ನಡೆದಿದೆ. ತನ್ನ ಪತ್ನಿಯ ಜತೆ ಸಂತೋಷ್ ಅನೈತಿಕ ಸಂಬಂಧ ಬೆಳಸಿದನೆಂದು ಅರುಚ್ಚಾಮಿ ದೂರಿದ್ದರು. ಅದನ್ನು ಪ್ರಶ್ನಿಸಲು ಸಂತೋಷ್ ನ ಮನೆಗೆ ಹೋಗಿದ್ದು ಆ ವೇಳೆ ಮಾತು ಬೆಳೆದು ಕೊಲೆ ನಡೆದಿದೆ. ಅರುಚ್ಚಾಮಿಯ ಪತ್ನಿಯೇ ಕೊಲೆ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

0 Comments