Ticker

6/recent/ticker-posts

Ad Code

ಕಿಳಿಂಗಾರ್ ನಲ್ಲಿ ಗಣೇಶೋತ್ಸವದ ಚಿತ್ರ ರಚನೆ ಸ್ಪರ್ಧೆ ಸಂಪನ್ನ


ಕಿಳಿಂಗಾರ್:  ಯುವ ಕೇಸರಿ ಆರ್ಟ್ಸ್‌ ಅಂಡ್‌ ಸ್ಪೋರ್ಟ್ಸ್ ಕ್ಲಬ್ ಕಿಳಿಂಗಾರ್ ಇದರ ವತಿಯಿಂದ ಗಣೇಶೋತ್ಸವದ ಪ್ರಯುಕ್ತ ಚಿತ್ರ ರಚನೆ ಸ್ಫರ್ಧೆ ಕಿಳಿಂಗಾರ್ ಶಾಲೆಯಲ್ಲಿ  ಕ್ಲಬ್ಬಿನ ಅಧ್ಯಕ್ಷ ರಾಮ ಬಿ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಶಾಲಾ ಅಧ್ಯಾಪಕಿ ಸಹನ  ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಏಕಲವ್ಯ ಬಾಲಗೋಕುಲದ ಮಾತಾ ಶ್ರಿ ಜಯಶ್ರೀ ಯನ್ ಬೇಳ ಶುಭ ಹಾರೈಸಿದರು ಕ್ಲಬ್ಬಿನ ಸಂಚಾಲಕರಾದ ನಾರಾಯಣ ಪಿ ಪೆರಡಾಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ 

ಯಜ್ಞ ಕುಮಾರ್ ಅನ್ನೆಪಲ್ಲಡ್ಕ, ವಸಂತ, ಅಶೋಕ, ಸುಧಾಕರ, ರಂಜಿತ್, ಪ್ರವೀಣ್, ಸಂತೋಶ್, ಪ್ರಕಾಶ್, ಜಯರಾಜ್ ಹಾಗೂ ಏಕಲವ್ಯ ಬಾಲಗೋಕುಲದ ಪುಟಾಣಿಗಳು ಉಪಸ್ಥಿತರಿದ್ದರು. ಚಿತ್ರ ರಚನೆ ಸ್ಫರ್ಧೆಯಲ್ಲಿ ಯಲ್ ಪಿ ವಿಭಾಗ ಪ್ರಥಮ ವಿಜೇಶ್ ಯನ್, ಯಂ ಎಸ್ ಸಿ ಯಚ್ ಎಸ್ ನೀರ್ಚಾಲ್, 

ದ್ವಿತೀಯ- ಯಶಿಕ ಸಿ ಎಸ್ 

ಜಿ ಯಚ್ ಎಸ್ ಸೂರಂಬೈಲ್, ತೃತೀಯ- ತನುಶ್ ಸಿ ಎಸ್ 

ಜಿ ಯಚ್ ಎಸ್ ಸೂರಂಬೈಲ್, ಯುಪಿ ವಿಭಾಗ- ಪ್ರಥಮ ಅಭಿಷೇಕ್ ಎ, ಯಂ ಎಸ್ ಸಿಯಚ್ಎಸ್ಎಸ್ ನೀರ್ಚಾಲ್, ದ್ವಿತೀಯ ಅರ್ಚನಾ ಬಿ, ಸೈಂಟ್ ಮೇರೀಸ್ ಬೇಳ, ತೃತೀಯ- ವೈಷ್ಣವ್ ಪಿ, ಯಂ ಎಸ್ ಸಿಯಚ್ಎಸ್ಎಸ್ ನೀರ್ಚಾಲ್, ಹೈಸ್ಕೂಲ್ ವಿಭಾಗ ಯಂ ಎಸ್ ಸಿ ಯಚ್ ಎಸ್ ನೀರ್ಚಾಲ್ ಶಾಲೆಯ ವಿಷ್ಣು ಯನ್, ಚಂಪಕ ಯಂ, ಪ್ರಜ್ಯೋತ್ ಆರ್ ಕ್ರಮವಾಗಿ ಪ್ರಥಮ ದ್ವಿತೀಯ, ತೃತೀಯ ಸ್ಥಾನವನ್ನು ಪಡೆದರು. ಸಾರ್ವಜನಿಕ ವಿಭಾಗದಲ್ಲಿ ವೈಷ್ಣವಿ ಬಹುಮಾನಕ್ಕೆ ಅರ್ಹರಾದರು., ಕ್ಲಬ್ಬಿನ ಕಾರ್ಯದರ್ಶಿ ಮನೋಜ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ಶ್ರೀಜಿತ್ ವಂದಿಸಿದರು

Post a Comment

0 Comments