ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ ಭಾನುವಾರ ಪೆರಡಾಲ ಶ್ರೀ ಉದನೇಶ್ವರ ಸಭಾಭವನದಲ್ಲಿ ಜರಗಿತು. ಅಗಲ್ಪಾಡಿ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಹಿರಿಯರಾದ ಉಪ್ಪಂಗಳ ವಾಸುದೇವ ಭಟ್ ದೀಪಬೆಳಗಿಸಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಮಿತಿ ರೂಪೀಕರಣ ಸಭೆಯಲ್ಲಿ ನಾಡಿನ ಭಗವದ್ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಉತ್ತಮವಾದ ಸಮಿತಿಯನ್ನು ರೂಪಿಸಲಾಗಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಹಸಿರುವಾಣಿ ಮೆರವಣಿಗೆಯೊಂದಿಗೆ ಆರಂಭವಾಗುತ್ತದೆ. ಅದನ್ನು ವೈಭವದಿಂದ ನಾವು ನಡೆಸಿದರೆ ಬ್ರಹ್ಮಕಲಶೋತ್ಸವವು ಬಹುವೈಭವದಿಂದ ದೇವರ ಇಚ್ಛೆಯಂತೆ ನಡೆಯುತ್ತದೆ. ಉಗ್ರಾಣ ಮುಹೂರ್ತದ ನಂತರ ದೇವತಾಚೈತನ್ಯವು ಸ್ವಯಂಸೇವಕರಲ್ಲಿ ಎಲ್ಲಾ ಕೆಲಸಗಳನ್ನೂ ಮಾಡಿಸುತ್ತದೆ. ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆಯಿಂದ ಅವರವರ ಕರ್ತವ್ಯವನ್ನು ನಿರ್ವಹಿಸಬೇಕು. ದೇವರನ್ನು ಅರಿವ ಜ್ಞಾನ ಲಭಿಸಿದರೆ ಜೀವನ ಪಾವನವಾಗುತ್ತದೆ. ಭಗವದ್ಭಕ್ತರು ದಾನರೂಪದಲ್ಲಿ ನೀಡಿದ ಸಂಪತ್ತು ದುರ್ಬಳಕೆಯಾಗಬಾರದು ಎಂದರು. ಅರ್ಚಕ ಯೋಗೀಶ್ ಕಡಮಣ್ಣಾಯ ಮಾತನಾಡಿ ಜೀವನದಲ್ಲಿ ಯಾರೂ ಶಾಶ್ವತರಲ್ಲ. ನಾವು ಮಾಡುವ ಉತ್ತಮ ಕಾರ್ಯಗಳು ಎಂದೂ ಶಾಶ್ವತವಾಗುತ್ತದೆ ಎಂದರು. ಕೃಷ್ಣಯ್ಯ ಬಲ್ಲಾಳ್ ಕೊಡ್ಯಮೆ ಅರಮನೆ, ವಾಸುದೇವ ಕೊಳತ್ತಾಯ, ಚಂದ್ರಹಾಸ ರೈ ಪೆರಡಾಲಗುತ್ತು, ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ಅರ್ಚಕ ಶಿವರಾಮ ಭಟ್ ಕಿಳಿಂಗಾರು, ಮೊಕ್ತೇಸರ ಜಗನ್ನಾಥ ರೈ ಪೆರಡಾಲಗುತ್ತು, ಮೊಕ್ತೇಸರ ಸೀತಾರಾಮ ನವಕಾನ, ಗೋಪಾಲ ಭಟ್ ಪಟ್ಟಾಜೆ, ಪ್ರೋ. ಶ್ರೀನಾಥ್ ಎ., ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಸೂರ್ಯನಾರಾಯಣ ಬಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಮೂರ್ತಿ ವೆಂಕಟೇಶ್ವರ ಭಟ್ಟ ಪಟ್ಟಾಜೆ ಪ್ರಾರ್ಥನೆ ಹಾಡಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಸ್ವಾಗತಿಸಿ, ಮೊಕ್ತೇಸರ ಕೃಷ್ಣ ಬದಿಯಡ್ಕ ವಂದಿಸಿದರು. ಯುವ ವಿಭಾಗದ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಯುವಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಜೀರ್ಣೋದ್ಧಾರ ಸಮಿತಿ ಜೊತೆಕಾರ್ಯದರ್ಶಿಗಳಾದ ಗಣೇಶ್ ಪ್ರಸಾದ ಕಡಪ್ಪು, ಉದಯಶಂಕರ ಪಿ.ಎಸ್., ಲೆಕ್ಕಪರಿಶೋಧಕ ಸತೀಶ ಕುಮಾರ ಪುದ್ಯೋಡು, ಶಿವಶಕ್ತಿ ಸದಸ್ಯರು ಸಹಕರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ರಚನೆ:
ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು 2026 ಏಪ್ರಿಲ್ ತಿಂಗಳಿನಲ್ಲಿ ಜರಗಲಿದೆ. ಬ್ರಹ್ಮಕಲಶೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಬಿ.ವಸಂತ ಪೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ಜಗನ್ನಾಥ ರೈ ಪೆರಡಾಲಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿಯಾಗಿ ಸೂರ್ಯನಾರಾಯಣ ಬಿ. ಹಾಗೂ ಇತರ ಉಪಸಮಿತಿಗಳನ್ನು ರಚಿಸಲಾಯಿತು.
0 Comments