ಕಾಸರಗೋಡು: ಸಿರಿಬಾಗಿಲು ಮಂಜತ್ತಡ್ಕದಲ್ಲಿ ಮೂರ್ಛಾವಸ್ಥೆ ಸ್ಥಿತಿಯಲ್ಲಿ ಕಂಡು ಬಂದ ದೈವನರ್ತಕ ಮೃತಪಟ್ಟಿದ್ದಾರೆ. ಪೇರಾಲ್ ಕಣ್ಣೂರು ಚೊಡಾಲು ಉಮೇಶ(31) ಮೃತಪಟ್ಟ ವ್ಯಕ್ತಿ. ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಅವರು ಕೊನೆಯುಸಿರೆಳೆದರು.
ಗುರುವಾರ ಮದ್ಯಾಹ್ನ 11 ಗಂಟೆಯ ವೇಳೆ ಉಮೇಶ ಅವರು ಮಂಜತ್ತಡ್ಕದಲ್ಲಿ ಮೂರ್ಚಾವಸ್ಥೆಯಲ್ಲಿ ಕಂಡು ಬಂದಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೂ ಅನಂತರ ಪೆರಿಯಾರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು.
0 Comments