ಅಣಂಗೂರು: ಜಿ ಎಲ್ ಪಿ ಎಸ್ ಅಣಂಗೂರು ಶಾಲೆಯ ತರಕಾರಿ ತೋಟಕ್ಕೆ ತರಕಾರಿ ಸಸಿ ನೆಡುವ ಮೂಲಕ ಆರಂಭ ಮಾಡಲಾಯಿತು.ಶಾಲೆಯ ನಿವೃತ್ತ ಅಧ್ಯಾಪಕರು ಹಾಗೂ ಉತ್ತಮ ಕೃಷಿಕರೂ ಆದ ಮ್ಯಾಥ್ಯೂ ಕೆ ಜೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ವಾರ್ಡ್ ಕೌನ್ಸಿಲರ್ ಖಾಲಿದ್ ಪಚ್ಚಕಾಡ್ ವಿಶಿಷ್ಟ ಅತಿಥಿಗಳಾಗಿದ್ದರು.ಶಾಲಾ ಮುಖ್ಯೋಪಾಧ್ಯಾಯಿನಿ ಶಾಂತಿ ಕೆ ಅಧ್ಯಕ್ಷತೆ ವಹಿಸಿದರು.ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರದೀಪ್,ನಿವೃತ್ತ ಅಧ್ಯಾಪಿಕೆ ಶೆರ್ಲಿ ಟೀಚರ್ ಶುಭಾಶಂಸನೆಗೈದರು.ವಿಖ್ಯಾತ್ ರೈ ಸ್ವಾಗತಿಸಿ ಬಿಂದು.ಕೆ.ವಿ ಧನ್ಯವಾದ ಹೇಳಿದರು.
0 Comments