Ticker

6/recent/ticker-posts

ಮುಳ್ಳೇರಿಯಾದ ಸರಕಾರಿ ಮದ್ಯದಂಗಡಿ ಶೀಘ್ರವೇ ಬದಿಯಡ್ಕಕ್ಕೆ ಸ್ಥಳಾಂತರ?


 ಬದಿಯಡ್ಕ: ಶೀಘ್ರದಲ್ಲಿಯೇ ಬದಿಯಡ್ಕದಲ್ಲಿ ಸರಕಾರದ ಬಿವರೇಜಸ್ ಮದ್ಯದಂಗಡಿ ಆರಂಭವಾಗಲಿದೆಯೆಂದು ತಿಳಿದು ಬಂದಿದೆ. ಈಗಾಗಲೇ ಮುಳ್ಳೇರಿಯಾದಲ್ಲಿ ಕಾರ್ಯಾಚರಿಸುತ್ತಿರುವ ಬೆವ್.ಕೋ. ಬಿಜವರೇಜಸ್ ಮದ್ಯದಂಗಡಿಯನ್ನು ಬದಿಯಡ್ಕಕ್ಕೆ ತರುವ ಬಗ್ಗೆ ತೆರೆ ಮರೆಯ ಪ್ರಯತ್ನ ನಡೆಯುತ್ತಿದೆ. ಬದಿಯಡ್ಕ ಬಸ್ಸು ನಿಲ್ದಾಣದ ಮುಂಭಾಗದ ಕಟ್ಟಡ ಅಥವಾ ಪೆರ್ಲ ರಸ್ತೆಯ ಕಟ್ಟಡದಲ್ಲಿ ಮದ್ಯದಂಗಡಿ ತೆರೆಯುವ ಬಗ್ಗೆ ಮಾತುಕತೆ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲವೆಂದು ಕಟ್ಟಡ ಮಾಲಕರು ತಿಳಿಸಿದ್ದಾರೆ. ಈ ಹಿಂದೆ ಹೆದ್ದಾರಿಯಿಂದ 200 ಮೀಟರ್ ದೂರವಿರಬೇಕೆಂಬ ಕಾನೂನಿನ ಹಿನ್ನೆಲೆಯಲ್ಲಿ ಬದಿಯಡ್ಕದಲ್ಲಿ ಕಾರ್ಯಾಚರಿಸುತ್ತಿದ್ದ ಮದ್ಯದಂಗಡಿ ಮುಳ್ಳೇರಿಯಾ ಪೇಟೆಗೆ ಸ್ಥಳಾಂತರಗೊಂಡಿತ್ತು. ಆದರೆ ಮುಳ್ಳೇರಿಯಾದಲ್ಲಿ ವ್ಯಾಪಾರ ತೀರಾ ಕಡಿಮೆ ಎಂದು ಬೆವ್ ಕೋ ಅಧಿಕಾರಿಗಳು ದೂರಿದ್ದರು.

Post a Comment

0 Comments