ಕಾಸರಗೋಡು: ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್‌ನ ಹಿಂದೆ ಇರುವ ಒಳಸಂಚು ಸಂಪೂರ್ಣವಾಗಿ ಬಹಿರಂಗಪಡಿಸಬೇಕೆಂದು ಬಿಜೆಪಿ ವಲಯಾಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ..
ಸಿ.ಎನ್. ಚಿನ್ನಯ್ಯ ಮಾಡಿದ ಆರೋಪಗಳು ಆಧಾರರಹಿತವೆಂದು ಕರ್ನಾಟಕ ಪೊಲೀಸರ ತನಿಖೆಯಲ್ಲೇ ಸಾಬೀತಾಗಿದೆ. ಚಿನ್ನಯ್ಯನ ಹಿಂದಿರುವ ದುಷ್ಟ ಶಕ್ತಿಗಳು ಹಾಗೂ ವ್ಯಕ್ತಿಗಳನ್ನು, ಸಮಗ್ರ ತನಿಖೆಯ ಮೂಲಕ ಕಾನೂನಿನ ಮುಂದೆ ತರಬೇಕೆಂದು ಅವರು ಅಭಿಪ್ರಾಯಪಟ್ಟರು.
ಸನಾತನ ಧರ್ಮರಕ್ಷಣೆಗೆ ಮತ್ತು ಸಾಮಾಜಿಕ ಪರಿವರ್ತನೆಗೆ ಕಾರ್ಯನಿರ್ವಹಿಸುತ್ತಿರುವ ಮಹಾಕ್ಷೇತ್ರ ಧರ್ಮಸ್ಥಳ. ಕೇವಲ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಸಾಮಾನ್ಯ ಜನರ ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಅಪೂರ್ವ ಕೇಂದ್ರವೇ ಇದು. ಇಂತಹ ದೇವಸ್ಥಾನವನ್ನು ನಾಶಗೊಳಿಸಲು ಮತ್ತು ಅವಮಾನಿಸಲು ನಡೆದ ಪ್ರಯತ್ನ ದೊಡ್ಡ ಒಳಸಂಚಿನ ಅಂಗವಾಗಿತ್ತು. ಆದರೆ, ಆದರೆ ಇದು ವಿಫಲವಾಗಿದೆ ಎಂದು ಶ್ರೀಕಾಂತ್ ಹೇಳಿದರು.
ಮಾಸ್ಕ್ ಮ್ಯಾನ್ ಮಾಡಿದ ಆರೋಪಗಳು ಸಾಮಾನ್ಯ ಬುದ್ಧಿ ವಿರುದ್ಧವಾಗಿದ್ದರೂ ಅದಕ್ಕೆ ಅನಗತ್ಯವಾದ ಪ್ರಚಾರ ನೀಡಿದವರು, ಇಂದು ಮಾಸ್ಕ್ ಮ್ಯಾನ್‌ನ ಮುಖವಾಡ ಉದುರಿಬಿದ್ದಾಗ ಮೌನವಾಗಿರುವುದನ್ನು ಶ್ರೀಕಾಂತ್ ಟೀಕಿಸಿದರು.

0 Comments