ಕಾಸರಗೋಡು; ಪೆರಿಯ ಅವಳಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಇಬ್ಬರಿಗೆ ಸರಕಾರ ಪರೋಳ್ ನೀಡಿದೆ. ಇದನ್ನು ಖಂಡಿಸಿ ನಾಳೆ (ಆದಿತ್ಯವಾರ) ಪೆರಿಯ ಕಲ್ಯೋಟ್ ಬಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಯಲಿದೆ. ಯೂತ್ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿಲ್ಲ.
ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದ 2ನೇ ಆರೋಪಿ ಕೆ.ಅನಿಲ್ ಕುಮಾರ್, 8 ನೇ ಆರೋಪಿ ಸುಭೀಶ್ ಎಂಬಿವರಿಗೆ ಸರಕಾರ ಪರೋಳ್ ನೀಡಿದೆ. ಪರೋಳ್ ನೀಡಬಾರದು ಎಂಬ ಪೋಲೀಸ್ ವರದಿಯನ್ನು ಲೆಕ್ಕಿಸದೆ ಪರೋಳ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಈ ಹಿನ್ನೆಲೆಯಲ್ಲಿ ನಾಳೆ ಸಂಜೆ ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ಕಲ್ಯೋಟ್ ಸ್ಮೃತಿ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ. ಏಚ್ಚಿಲಡ್ಕದಲ್ಲಿ ಮೆರವಣಿಗೆ ಸಮಾಪನಗೊಳ್ಳಲಿದ್ದು ಅಲ್ಲಿ ಪ್ರತಿಭಟನಾ ಜ್ವಾಲೆ ಎಂಬ ಕಾರ್ಯಕ್ರಮ ನಡೆಯಲಿದೆ.
ಇದೇ ವೇಳೆ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪೊಲೀಸರು ಅನುಮತಿ ನೀಡದಿದ್ದರೂ ಕಾರ್ಯಕ್ರಮ ನಡೆಸುವುದಾಗಿ ಯೂತ್ ಕಾಂಗ್ರೆಸ್ ನೇತಾರರು ತಿಳಿಸಿದ್ದಾರೆ

0 Comments