ಯುವತಿಯ ಮೇಲೆ ಪೆಟ್ರೋಲ್ ಎರಚಿ ಕಿಚ್ಚಿಕ್ಕಿದ ವೇಳೆ ಗಂಭೀರ ಗಾಯಗೊಂಡಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು ಕೊಟ್ಟಾವ್ ನಿವಾಸಿ ಜಿಜೇಶ್(39) ಮೃತಪಟ್ಟ ಯುವಕ. ಇಂದು (ಶನಿವಾರ) ಬೆಳಗ್ಗೆ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಅವರು ಕೊನೆಯುಸಿರೆಳೆದರು. ಕಳೆದ ಬುದವಾರದಂದು ಜಿಜೇಶ್ ಅವರು ಗೆಳತಿ ಪ್ರವೀಣ(33) ಳ ಮೈಮೇಲೆ ಪೆಟ್ರೋಲ್ ಎರಚಿ ಕಿಚ್ಚಿಕ್ಕಿದ್ದರು. ಗಂಭೀರ ಗಾಯಗೊಂಡ ಇಬ್ಬರನ್ನೂ ಪೆರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರವೀಣ ಗುರುವಾರ ಮುಂಜಾನೆ ಕೊನೆಯುಸಿರೆಳೆದಳು. ಜಿಜೇಶ್ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ
ಜಿಜೇಶ್ ಹಾಗೂ ಪ್ರವೀಣ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು.

0 Comments