Ticker

6/recent/ticker-posts

Ad Code

ಕರ್ತವ್ಯದ ಮಧ್ಯೆ ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಕುಸಿದು ಬಿದ್ದು ಮೃತ್ಯು


 ಕಾಸರಗೋಡು: ಕರ್ತವ್ಯದ ಮಧ್ಯೆ  ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪಾಣತ್ತೂರು ಚಿರಂಕಡವ್ ನಿವಾಸಿ ಸುನೀಶ್ ಅಬ್ರಹಾಂ ಮೃತಪಟ್ಟವರು. ಇಂದು (ಶನಿವಾರ)  ಮುಂಜಾನೆ ಈ ಘಟನೆ ನಡೆದಿದೆ. ಇವರು ಮುಂಜಾನೆ ಪಾಣತ್ತೂರಿನಿಂದ ಕಾಞಂಗಾಡಿಗೆ ಬರುವ ಬಸ್ಸಿನ ಕಂಡೆಕ್ಟರ್ ಆಗಿದ್ದಾರೆ. ಬಸ್ಸು ಕೋಳಿಚ್ಚಾಲು ತಲುಪಿದಾಗ ಎದೆ ನೋವು ಕಾಣಿಸಿಕೊಂಡಿತು. ಬಸ್ಸಿನಲ್ಲಿ ಕುಸಿದು ಬಿದ್ದ ಅವರನ್ನು ಮಾಲಕಲ್ ಖಾಸಗಿ ಆಸ್ಪತ್ರೆಗೆ, ಅನಂತರ ಮಾವುಂಗಾಲ್ ಆಸ್ಪತ್ರೆಗೆ ತಲುಪಿಸಲಾಯಿತು. ಈ ವೇಳೆ ಅವರು ಕೊನೆಯುಸಿರೆಳೆದಿದ್ದರು.

Post a Comment

0 Comments