Ticker

6/recent/ticker-posts

Ad Code

ಸೀತಾಂಗೋಳಿ ಎಚ್.ಎ.ಎಲ್.ಕಂಪನಿಯ ನೌಕರನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಸೀತಾಂಗೋಳಿ: ಇಲ್ಲಿನ ಎಚ್.ಎ.ಎಲ್.ಕಂಪನಿಯ ನೌಕರನ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾಯಿಪ್ಪಾಡಿ ಬಳಿಯ ಕುದ್ರೆಪ್ಪಾಡಿ ನಿವಾಸಿ ಶಂಕರ ಪಾಟಾಳಿಯವರ ಪುತ್ರ ಹರಿಕೃಷ್ಣ(22) ಮೃತಪಟ್ಟವರು. ನಿನ್ನೆ (ಸೋಮವಾರ) ಸಾಯಂಕಾಲ ಹರಿಕೃಷ್ಣರನ್ನು ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ  ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ.  ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದರು. ಮೃತರು ತಂದೆ, ತಾಯಿ ರತಿ,ಸಹೋದರ ಕಿರಣ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments