ದುಬೈ: ಮಾರ್ಗದೀಪ ಸಾಂಸ್ಕೃತಿಕ ಸಮಿತಿ ದುಬೈ ಯುಎಇ ವತಿಯಿಂದ ನಡೆದ ಹನ್ನೊಂದನೇಯ ಗಣೇಶೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಕುಮಾರಿ ದಿವ್ಯನಿಧಿ ರೈ ಎರುಂಬುರವರಿಗೆ "ಸಂಗೀತ ಯಕ್ಷನಾಟ್ಯ ಭೂಷಣ" ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್,ಉದ್ಯಮಿ ಡಾ. ಬಿ. ಆರ್. ಶೆಟ್ಟಿ ಅಬುಧಾಬಿ, ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಮಾಜಿ ಸಚಿವರಾದ ಶ್ರೀ ಕೃಷ್ಣ ಜೆ. ಪಾಲೆಮಾರ್,ಮೂಡಬಿದ್ರೆ ಶಾಸಕರಾದ ಉಮನಾಥ್ ಕೋಟ್ಯಾನ್,ಉದ್ಯಮಿ ರಾಘವೇಂದ್ರ ಕುಡ್ವ,ಮಾರ್ಗದೀಪ ಸಮಿತಿಯ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ,ಉಪಾಧ್ಯಕ್ಷರಾದ ಪ್ರವೀಣ್ ಉಪ್ಪೂರು,ಜೊತೆ ಕಾರ್ಯದರ್ಶಿಯಾದ ಬಿಪಿನ್ ಚಂದ್ರ ನಾಯಕ್, ಕೋಶಾಧಿಕಾರಿ ರಾಜೇಶ್ ರಾವ್, ಕಾರ್ಯಕ್ರಮದ ಸಂಚಾಲಕರಾದ ಸುಗಂಧರಾಜ ಬೇಕಲ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕು.ದಿವ್ಯನಿಧಿ ರೈಯವರಿಂದ "ಸ್ವರ-ಸಮರ್ಪಣೆ" ಕಾರ್ಯಕ್ರಮ ನಡೆಯಿತು.
0 Comments