Ticker

6/recent/ticker-posts

Ad Code

ಸ್ಕೂಟರಿಗೆ ಬಸ್ಸು ಡಿಕ್ಕಿ ಹೊಡೆದು ಭಾವಿ ವಧು ಮೃತ್ಯು; ಮೃತಳು ವಾರದ ಹಿಂದೆಯಷ್ಟೆ ಸರಕಾರಿ ಉದ್ಯೋಗಕ್ಕೆ ಸೇರಿದ್ದ ಯುವತಿ


 ಸ್ಕೂಟರಿಗೆ ಬಸ್ಸು ಡಿಕ್ಕಿ ಹೊಡೆದು ಭಾವಿ ವಧು ಮೃತಪಟ್ಟ ಘಟನೆ ನಡೆದಿದೆ. ಕೊಲ್ಲಂ ತೊಡಿಯೂರು ನಿವಾಸಿ ಅಂಜನ(24) ಮೃತಪಟ್ಟ ಯುವತಿ. ಇಂದು (ಮಂಗಳವಾರ) ಬೆಳಗ್ಗೆ 10.30 ಕ್ಕೆ ಶಾಸ್ತಾಂಕೋಟ್ಟ ಬಳಿ ಈ ಅಫಘಾತ ನಡೆದಿದೆ. ಕಳೆದ ಸೋಮವಾರ ಅಂಜನಳಿಗೆ ಸ್ಥಳೀಯ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಉದ್ಯೋಗ ಲಭಿಸಿದ್ದು ಕರ್ತವ್ಯಕ್ಕೆ ಸೇರಿದ್ದಳು. ಇಂದು ಬೆಳಗ್ಗೆ ಕರ್ತವ್ಯ ‌ನಿಮಿತ್ತ ಸ್ಕೂಟರಿನಲ್ಲಿ ಪ್ರಯಾಣಿಸುವ ವೇಳೆ ಅಫಘಾತ ಉಂಟಾಗಿದೆ. 10 ದಿನಗಳ ಹಿಂದೆಯಷ್ಟೆ ಅಂಜನಳ ಮದುವೆ ನಿಶ್ಚಿತಾರ್ಥ ನಡೆದಿದ್ದು ಅಕ್ಟೋಬರ್ 19 ರಂದು ಮದುವೆ ನಡೆಯ ಬೇಕಿತ್ತು

Post a Comment

0 Comments