Ticker

6/recent/ticker-posts

Ad Code

ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವ ಇಂಜಿನಿಯರ್ ದಾರುಣ ಮೃತ್ಯು


   ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಯುವ ಇಂಜಿನಿಯರ್ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬೇತೂರ್ ಪಾರ ವಟ್ಟಂತಟ್ಟ ಕೀರ್ತಕರ ನಿವಾಸಿ ವಿಜಯನ್ ಎಂಬವರ ಪುತ್ರ ಜಿತೇಶ್(27) ಮೃತಪಟ್ಟ ಯುವಕ. ನಿನ್ನೆ (ಸೋಮವಾರ) ಮದ್ಯಾಹ್ನ 2.30 ಕ್ಕೆ ಕಾನತ್ತೂರು- ಇರಿಯಣ್ಣಿ ರಸ್ತೆಯ ಮಂಜಕಲ್ ಎಂಬಲ್ಲಿ ಈ ಘಟನೆ ನಡೆದಿದೆ. ಬೋವಿಕಾನದಿಂದ ಮನೆಗೆ ಹೋಗುತ್ತಿರುವ ವೇಳೆ  ಮಂಜಕ್ಕಲ್ ಪ್ರಯಾಣಿಕರ ತಂಗುದಾಣದ ಬಳಿ ಬೇರೊಂದು ವಾಹನವನ್ನು ಹಿಂದಿಕ್ಕುವ ವೇಳೆ ಅಫಘಾತ ಉಂಟಾಗಿದೆ. ಮೃತ ಜಿತೇಶ್ ಬೆಂಗಳೂರು ವಿಮಾನನಿಲ್ದಾಣದಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿದ್ದು ಓಣಂ ಅಂಗವಾಗಿ ಊರಿಗೆ ಬಂದಿದ್ದನು. ಮೃತನು ತಂದೆ, ತಾಯಿ ಶಾಲಿನಿ, ಸಹೋದರ ಜಿಷ್ಣು ಎಂಬಿವರನ್ನು ಅಗಲಿದ್ದಾರೆ

Post a Comment

0 Comments